Advertisement

ದೋಣಿಯಲ್ಲಿ ತೇಲಿ ಹೊರಬಂದ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಮುಖಪುಟ

07:12 PM Dec 12, 2018 | Team Udayavani |

ಉಡುಪಿ: ‘ದಾರಿ ತಪ್ಪಿಸು ದೇವರೇ’ ಪುಸ್ತಕ ಖ್ಯಾತಿಯ ಮಂಜುನಾಥ್ ಕಾಮತ್ ಅವರ ಮುಂಬರುವ ಹೊಸ ಪುಸ್ತಕ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’, ಇದರ ಮುಖಪುಟವನ್ನು ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಲಾಯಿತು. ಉಡುಪಿಯ ಕೆಮ್ಮಣ್ಣು ಪಡುತೋನ್ಸೆ ತೂಗುಸೇತುವೆಯ ಬಳಿ 40 ದ್ವೀಪಗಳ (ಕುದುರು) ನಾವಿಕ ಸತ್ಯಣ್ಣ ಅವರು ಹೊಸ ಪುಸ್ತಕದ ಮುಖಪುಟವನ್ನು ದೋಣಿಯಲ್ಲಿದ್ದ ಗಣ್ಯರ ಸಮ್ಮುಖದಲ್ಲಿ ನದಿ ನೀರಿನಲ್ಲಿ ದೋಣಿ ಚಲಿಸುತ್ತಿರುವಂತೆಯೇ ಅನಾವರಣಗೊಳಿಸಿದರು. ಬಳಿಕ ಸತ್ಯಣ್ಣನ ದೋಣಿಯಲ್ಲಿ ದ್ವೀಪ ಪ್ರದೇಶಗಳಿಗೆ ಹಾಗೆಯೇ ಒಂದು ಸುತ್ತು ಬರಲಾಯಿತು.


ಈ ಸಂದರ್ಭದಲ್ಲಿ ಪುಸ್ತಕದ ಲೇಖಕ ಮಂಜುನಾಥ ಕಾಮತ್, ಹಿರಿಯ ಪತ್ರಕರ್ತ ಸೋಮಶೇಖರ ಪಡುಕೆರೆ. ಛಾಯಾಗ್ರಾಹಕ ಶಶಿಕಾಂತ್ ಶೆಟ್ಟಿ. ನಿಥೇಶ್. ಮಾಧವ ಪೈ. ಅನಿಲ್ ಶೆಣೈ. ಸುಧೀರ್,  ಹೊನ್ನಾವರದ ವಿದ್ಯಾರ್ಥಿ ದಿನೇಶ್ ನಾಯಕ್ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಮುಂಜಾನೆಯ ಹಿತವಾದ ಕಡಲ ತಂಪು ಗಾಳಿಗೆ ಚುಮುಚುಮು ಚಳಿಯಲ್ಲಿ ನದಿನೀರಿನಲ್ಲಿ ತೇಲುತ್ತಾ ನಾವಿಕ ಸತ್ಯಣ್ಣನವರ ಕೈಯಿಂದ ಸರಳವಾಗಿ ಮೂಡಿಬಂದ ಈ ಮುಖಪುಟ ಅನಾವರಣ ಕಾರ್ಯಕ್ರಮ ಕಾಮತರ ಸೃಜನಶೀಲತೆಗೆ ಸಾಕ್ಷಿಯಾದಂತಿತ್ತು.

Advertisement

ಈ ಹಿಂದಿನ ತಮ್ಮ ಪುಸ್ತಕವನ್ನು ಕಾಮತರು​​​​​​​ ವರಂಗ ಕೆರೆಯಲ್ಲಿ ಸೂರ್ಯೋದಯದ ಸಂದರ್ಭದಲ್ಲಿ ಮಿಂಜಿರನೆಂಬ ವ್ಯಕ್ತಿಯ ಕೈಯಿಂದ ಬಿಡುಗಡೆಗೊಳಿಸಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ. ಓದುಗರಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಈ ಪುಸ್ತಕ ಸದ್ಯದಲ್ಲಿಯೇ ವಿನೂತನ ರೀತಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಮಂಜುನಾಥ್ ಕಾಮತ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Click: Shashikanth Shetty​​​​​​​
Video: Sudhir



Advertisement

Udayavani is now on Telegram. Click here to join our channel and stay updated with the latest news.

Next