Advertisement

ಡಾಲಿ ಧನಂಜಯ್‍ರ ಹೊಸ ಭಗವದ್ಗೀತೆ: Watch

03:11 PM Sep 12, 2018 | |

ಡಾಲಿ ಧನಂಜಯ್ ಹಾಗೂ ಐರಾ ಮೋರಾ ಅಭಿನಯದ “ಭೈರವ ಗೀತ’ ಚಿತ್ರದ “ನೀ ನನ್ನ ಭಗವದ್ಗೀತೆ’ ಪೂರ್ತಿ ಹಾಡು ಬಿಡುಗಡೆಯಾಗಿದೆ. ಅಲ್ಲದೇ ನಿನ್ನೆಯಷ್ಟೇ ಹಾಡಿನ ಟೀಸರ್ ಬಿಡುಗಡೆಯಾಗಿತ್ತು. ಅಂದಹಾಗೆ ಈ ಹಾಡನ್ನು ಸಾಹಿತಿ ಕೆ. ಕಲ್ಯಾಣ್ ರಚಿಸಿದ್ದು, ವಿಜಯ್ ಯೇಸುದಾಸ್ ಹಾಗೂ ಚಿನ್ಮಯ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಗೌರಿ-ಗಣೇಶ ಹಬ್ಬದ ಅಂಗವಾಗಿ ಟೀಸರನ್ನು ಬಿಡುಗಡೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

Advertisement

ಹಾಡಿನಲ್ಲಿ ಧನಂಜಯ್ ಹಾಗೂ ಐರಾ ಮೋರಾ ಚುಂಬನದ ಹಿಸಿ-ಬಿಸಿ ದೃಶ್ಯ ಹಾಗೂ ಹೊಡೆದಾಟದ ದೃಶ್ಯಗಳು ಹೆಚ್ಚಾಗಿವೆ. “ಭೈರವ ಗೀತ’ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿವೆ. ಭಾಸ್ಕರ್ ರಾಶಿ ಹಾಗೂ ರಾಮ್​​ಗೋಪಾಲ್ ವರ್ಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಮ್​​​ಗೋಪಾಲ್ ವರ್ಮಾ ಶಿಷ್ಯ ಸಿದ್ದಾರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಜಜೀವನದಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ.

ಇನ್ನು ಈ ಚಿತ್ರ ರಾಶಿ ಕಂಬೈನ್ಸ್‌ ಹಾಗೂ ಕಂಪೆನಿ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿದೆ. ಹೆಸರಿಗೆ ತಕ್ಕಂತೆ ಇದೊಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯಾಗಿದ್ದು, ಪ್ರೀತಿಗಾಗಿ ಕ್ರೈಮ್‌ನತ್ತ ವಾಲುವ ಪ್ರೇಮಿಯೊಬ್ಬನ ಕಥೆಯನ್ನು ಹೊಂದಿದೆ. ಈ ನಡುವೆಯೇ ಸೂರಿ ನಿರ್ದೇಶನದ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರದಲ್ಲೂ ಧನಂಜಯ್‌ ನಾಯಕರಾಗಿ ನಟಿಸುತ್ತಿದ್ದಾರೆ. “ಭೈರವ ಗೀತಾ’ ಅಕ್ಟೋಬರ್ 12 ರಂದು ಬಿಡುಗಡೆಯಾಗುತ್ತಿದ್ದು ಹೇಗೆ ಮೂಡಿ ಬಂದಿದೆ ಎನ್ನುವುದಕ್ಕೆ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next