Advertisement

ಭ್ರಮೆಯಲ್ಲಿ ಹೊಸಬರು

03:53 PM Sep 11, 2020 | Suhan S |

ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ನೈಜ ಘಟನೆಗಳನ್ನು ತೆರೆಮೇಲೆ ತರುವ ಪ್ರಯತ್ನ ಆಗುತ್ತಿರುತ್ತದೆ. ಈಗ ಅಂಥದ್ದೇ ಒಂದು ಘಟನೆ ತೆರೆಮೇಲೆ ದೃಶ್ಯರೂಪದಲ್ಲಿ ಬರುತ್ತಿದೆ. ಅದರ ಹೆಸರು “ಭ್ರಮೆ’.

Advertisement

ಕೆಲ ವರ್ಷಗಳ ಹಿಂದೆ ಕುಂದಾಪುರದಲ್ಲಿ ನಡೆದಂಥ ನೈಜ ಘಟನೆಯೊಂದನ್ನು ಇಟ್ಟುಕೊಂಡುನಿರ್ಮಾಣವಾಗಿರುವ “ಭ್ರಮೆ’ ಚಿತ್ರಕ್ಕೆ ಯುವ ನಿರ್ದೇಶಕ ಚರಣ ರಾಜ್‌. ಡಿ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಈ ಚಿತ್ರದ ಮೂಲಕ ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್‌ ನಾಯಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಹಾರರ್‌ – ಕಾಮಿಡಿ ಕಥಾಹಂದರ ಹೊಂದಿರುವ “ಭ್ರಮೆ’ ಚಿತ್ರದಲ್ಲಿ ನವೀನ್‌ ಅವರಿಗೆ ಅಂಜನಾ ಗೌಡ ಹಾಗೂ ಇಶಾನಾ ನಾಯಕಿಯರಾಗಿ ಜೋಡಿಯಾಗಿದ್ದಾರೆ.

ಉಳಿದಂತೆ ರಘು, ಬೆನಕ ಪವನ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಸೆ. 5ರಶಿಕ್ಷಕರ ದಿನಾಚರಣೆಯಂದು ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಹಿರಿಯ ನಿರ್ದೇಶಕ ಕೆ.ಎಸ್‌ ಭಗವಾನ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮುತ್ತುರಾಜ್‌, ಗಾಯಕ ಹರ್ಷಮೊದಲಾದವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಚರಣ ರಾಜ್‌, “ಕೆಲ ವರ್ಷಗಳ ಹಿಂದೆ ಕುಂದಾಪುರದಲ್ಲಿ ನಡೆದ ನೈಜ ಘಟನೆ ಈ ಸಿನಿಮಾ ಮಾಡಲು ನಮಗೆ  ಪ್ರೇರಣೆಯಾಯಿತು. ಚಿತ್ರದ ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್‌ ನರ್ಸ್‌. ಅಲ್ಲಿ ಏನೇನು ನಡೆಯುತ್ತದೆ ಅನ್ನೋದರ ಸುತ್ತ ಇಡೀ ಸಿನಿಮಾ ನಡೆಯುತ್ತದೆ’ ಎಂದರು. ಚಿತ್ರದ ನಾಯಕ ನವೀನ್‌, ನಾಯಕಿಯರಾದ ಅಂಜನಾ ಗೌಡ ಹಾಗೂ ಇಶಾನಾ ಚಿತ್ರದ ಅನುಭವಗಳು ಮತ್ತು ಪಾತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು. “ಭ್ರಮೆ’ ಚಿತ್ರದ ಹಾಡುಗಳಿಗೆ ಡಾ. ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next