Advertisement

ಉದ್ಯೋಗ ಸೃಷ್ಟಿಗೆ ಹೊಸ ವಿಧಾನ!

12:45 AM Apr 04, 2019 | Team Udayavani |

ಹೊಸದಿಲ್ಲಿ: ದೇಶದ ಇತಿಹಾಸದಲ್ಲೇ ಎನ್‌ಡಿಎ ಸರಕಾರದ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ದೇಶದಲ್ಲೇ ಅತಿದೊಡ್ಡ ಅಪ್ರಂಟಿಸ್‌ಶಿಪ್‌ ಯೋಜನೆ ಜಾರಿಗೆ ತರಲು ಹೊರಟಿದೆ.

Advertisement

ಮಾ. 25ರ ವರೆಗೆ ನೋಂದಣಿ ಮಾಡಿಕೊಂಡ 1533 ವಿವಿ ಹಾಗೂ ಕಾಲೇಜುಗಳ ಸುಮಾರು 9.25 ಲಕ್ಷ ವಿದ್ಯಾರ್ಥಿಗಳಿಗೆ ವಿವಿಧ ಉದ್ಯಮಗಳಲ್ಲಿ ಕೌಶಲ ತರಬೇತಿ ಅಡಿ 6 ತಿಂಗಳ ಅವಧಿಯ ಅಪ್ರಂಟಿಸ್‌ಶಿಪ್‌ ಅನ್ನು ಸರಕಾರ ಒದಗಿಸಲಿದೆ. ಇದಕ್ಕಾಗಿ ಸರಕಾರವು ವಿವಿಧ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಶ್ರೇಯಸ್‌ (ಸ್ಕೀಮ್‌ ಫಾರ್‌ ಹೈಯರ್‌ ಎಜುಕೇಶನ್‌ ಯೂತ್‌ ಫಾರ್‌ ಅಪ್ರಂಟಿಸ್‌ಶಿಪ್‌ ಆ್ಯಂಡ್‌ ಸ್ಕಿಲ್ಸ್‌) ಎಂಬ ಈ ಯೋಜನೆ ಅಡಿ ನೋಂದಣಿಗೆ ಸೂಚಿಸಲಾಗಿತ್ತು. ಇದು ತಾಂತ್ರಿಕೇತರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಕಂಪನಿಯಿಂದ 6 ಸಾವಿರ ರೂ. ಮಾಸಿಕ ವೇತನ ಇವರಿಗೆ ಸಿಗಲಿದೆ. ಜತೆ ಗೆ ಸರಕಾರದಿಂದ ಮಾಸಿಕ 1500 ರೂ. ರಿಎಂಬರ್ಸ್‌ಮೆಂಟ್‌ ಅನ್ನೂ ಪಡೆಯ ಬಹುದು. ವಿಶೇಷವಾಗಿ ದಕ್ಷಿಣ ಭಾರತದ ವಿದ್ಯಾರ್ಥಿಗಳನ್ನೇ ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ತಾಂತ್ರಿಕೇತರ ಕೋರ್ಸ್‌ ಮಾಡಿದ ವಿದ್ಯಾರ್ಥಿಗಳಿಗೆ ಕೌಶಲ ಒದಗಿಸುವುದು ಈ ಯೋಜನೆಯ ಉದ್ದೇಶ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಕೌಶಲ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಜಂಟಿಯಾಗಿ ರೂಪಿಸಿದ ಯೋಜನೆ ಇದಾಗಿದೆ. ಜುಲೈನಿಂದ 3 ಲಕ್ಷ ವಿದ್ಯಾರ್ಥಿಗಳಿಗೆ ಅಪ್ರಂಟಿಸ್‌ಶಿಪ್‌ ಒದಗಿಸಲಾಗುತ್ತಿದ್ದು, ಮೊದಲ ವರ್ಷದಲ್ಲಿ 5 ಲಕ್ಷದವರೆಗೂ ತಲುಪಬಹುದಾಗಿದೆ. ಮೇನಲ್ಲೇ ನೇಮಕ ಪ್ರಕ್ರಿಯೆ ಶುರುವಾಗಲಿದ್ದು, ಇದಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಈಗಾಗಲೇ ಮಾನವ ಸಂಪನ್ಮೂಲ ಸಚಿವಾಲಯ ಪತ್ರ ಬರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next