Advertisement

ಜೂ. 15ರಿಂದ ಹೊಸ ಶೈಕ್ಷಣಿಕ ವರ್ಷ

01:04 AM May 06, 2021 | Team Udayavani |

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆ ಹಿನ್ನೆಲೆ ಯಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿ ಗಳನ್ನು ಪರೀಕ್ಷೆ ಇಲ್ಲದೇ ತೇರ್ಗಡೆ ಮಾಡಿ ರುವ ಸರ್ಕಾರ ಈಗ ಬೇಸಿಗೆ ರಜಾ ಅವಧಿಯ ಹಾಗೂ ಮುಂದಿನ ಶೈಕ್ಷಣಿಕ ವರ್ಷ ಆರಂಭದ ದಿನಾಂಕ ಪ್ರಕಟಿಸಿದೆ.

Advertisement

ಹಿರಿಯ ಮತ್ತು ಕಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ (ಎಸ್ಸೆಸ್ಸೆಲ್ಸಿ ಹೊರತು ಪಡಿಸಿ)ಯ ಮಕ್ಕಳಿಗೆ ಜೂನ್‌ 14 ರ ವರೆಗೂ ರಜೆ ಇರಲಿದೆ. ಎಸೆಸಲ್ಸಿ ವಿದ್ಯಾರ್ಥಿ ಗಳಿಗೆ ಜೂನ್‌ ನಲ್ಲಿ ಪರೀಕ್ಷೆ ನಿಗದಿ ಯಾಗಿರುವುದರಿಂದ ಆ ವಿದ್ಯಾರ್ಥಿ ಗಳಿಗೆ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ರಜೆ ಇರದು.

ಜೂ.1ರಿಂದ 14ರವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್‌ಮನನ ತರಗತಿಗಳು ನಡೆಯ ಲಿವೆ. ಪ್ರೌಢ ಶಾಲಾ ಶಿಕ್ಷಕರು ರಜೆ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನ ಹರಿಸ ಬೇಕು. ದೂರ ವಾಣಿ ಮೂಲಕ ಸಂಪ ರ್ಕ ದಲ್ಲಿದ್ದು, ಅವರ ಕಲಿಕೆಗೆ ನೆರವಾಗ ಬೇಕು  ಎಂದು ಸಾರ್ವ  ಜನಿಕ ಶಿಕ್ಷಣ ಇಲಾಖೆ  ಸುತ್ತೋಲೆ  ಯಲ್ಲಿ ತಿಳಿಸಿದೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷ ಜೂ. 15 ರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next