Advertisement

ಶೀಘ್ರ ಬರಲಿವೆ 20 ರೂ. ಮುಖಬೆಲೆ ಹೊಸ ನೋಟು

10:34 AM Dec 26, 2018 | Harsha Rao |

ಹೊಸದಿಲ್ಲಿ: ಶೀಘ್ರದಲ್ಲೇ ಹೊಸ ವಿನ್ಯಾಸದ 20 ರೂ. ಮುಖಬೆಲೆಯ ನೋಟು ಬಿಡುಗಡೆಯಾಗಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ನಿರ್ಧಾರ ಕೈಗೊಂಡಿದ್ದು, ಸೆಂಟ್ರಲ್‌ ಬ್ಯಾಂಕ್‌ನ ದಾಖಲೆಗಳಿಂದ ಇದು ಬಹಿರಂಗ ಗೊಂಡಿದೆ.

Advertisement

200 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಜೊತೆಗೆ, ಈಗಾಗಲೇ ಆರ್‌ಬಿಐ 10, 50, 100 ಹಾಗೂ 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಈಗ ಹಳೆಯ 20 ರೂ. ನೋಟುಗಳು ಚಾಲ್ತಿಯಲ್ಲಿರುವಂತೆಯೇ, ಹೆಚ್ಚುವರಿ ಗುಣ ವಿಶೇಷಗಳಿರುವ 20ರೂ.ಗಳ ಹೊಸ ನೋಟು ಪರಿ ಚಯಿಸಲಾಗುತ್ತದೆ ಎಂದು ದಾಖಲೆಗಳು ತಿಳಿಸಿವೆ. ಆರ್‌ಬಿಐ ಅಂಕಿಅಂಶಗಳ ಪ್ರಕಾರ 2016, ಮಾರ್ಚ್‌ 31ರ ವೇಳೆಗೆ, 20 ರೂ.ಗಳ 4.92 ಶತಕೋಟಿ ಬಿ. ನೋಟುಗಳು ಚಲಾವಣೆಯಲ್ಲಿ ದ್ದವು, 2018ರ ಮಾರ್ಚ್‌ಗೆ 10 ಶತಕೋಟಿಗೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next