Advertisement

ಎಂದೂ ಬಿಡದ ಪ್ರಯತ್ನ; ಸೋತು ಗೆದ್ದ ಪ್ಯಾಪಿಲೋನ್‌

03:49 PM Aug 01, 2018 | |

ಜೈಲಿನಿಂದ ಪಾರಾಗಲು ಹಲವು ಪ್ರಯತ್ನ ಮಾಡಿ, ಕೊನೆಗೆ ಕಾಲು ಮುರಿದುಕೊಂಡು ಪ್ಯಾಪಿಲೋನ್‌ ಜೈಲಿನಲ್ಲಿ ಬಿದ್ದಿರುವುದನ್ನು ಪ್ಯಾಪಿಲೋನ್‌- 1ರಲ್ಲಿ ಓದಿದ್ದೇವೆ. ಅಂತೆಯೇ ಮುಂದಿನ ಸರಣಿಯ ಭಾಗ ಪ್ಯಾಪಿಲೋನ್‌- 2ರಲ್ಲಿದೆ. ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಮತ್ತು ಪ್ರದೀಪ್‌ ಕೆಂಜಿಗೆಯ ವರೇ ಬರೆದ ಈ ಕೃತಿಯಲ್ಲಿ ಪದೇ ಪದೇ ಜೈಲಿನಿಂದ ಪಾರಾಗಲು ಪ್ಯಾಪಿಲೋನ್‌ ಮಾಡುವ ಪ್ರಯತ್ನ ಹಾಗೂ ಒಬ್ಬಂಟಿ ಯಾಗಿ ಪಡುವ ಯಾತನೆ ಇದೆ. ಜೈಲಿನಿಂದ ಪರಾರಿಯಾಗಲು ಹೋಗಿ ಮತ್ತೆ ಜೈಲು ಸೇರುವ ಪ್ಯಾಪಿಲೋನ್‌ನ ಅವಿರತ ಪ್ರಯತ್ನ ಓದುಗರನ್ನು ಭಾವುಕರನ್ನಾಗಿ ಮಾಡುತ್ತದೆ.

Advertisement

ಘಟನೆ 1
ಜೀವಾವಧಿ ಶಿಕ್ಷೆಯ ಜತೆಗೆ ಕಠಿನ ಶಿಕ್ಷೆ ಅನುಭವಿಸಿ ಮತ್ತೆ ಸಹಜ ಖೈದಿಯಾಗುತ್ತಾನೆ ಪ್ಯಾಪಿ ಲೋನ್‌. ಈ ಸಂದರ್ಭದಲ್ಲಿ ಜೈಲಿನ ಮೇಲಧಿಕಾರಿಯ ಹೆಂಡತಿಯ ಪರಿಚಯಾಗುತ್ತದೆ. ಅವಳು ಈತನಿಗೆ ನಿತ್ಯವೂ ತಿನ್ನಲು ಮೀನು ತಂದುಕೊಡುತ್ತಿರುತ್ತಾಳೆ. ಇವುಗಳ ಮಧ್ಯೆ ಜೈಲಿನಿಂದ ತಪ್ಪಿಸಿಕೊಳ್ಳಬೇಕು ಎಂಬ ಪ್ಯಾಪಿಲೋನ್‌ ಪಯತ್ನ ಕಳಚಿರುವುದಿಲ್ಲ. ಅದರಂತೆ ಒಂದು ದಿನ ಜೈಲಿನಿಂದ ಪರಾರಿಯಾಗಲು ಹೋಗುತ್ತಾನೆ. ಆಪ್ತ ಸ್ನೇಹಿತನಿಂದ ಪೊಲೀಸ್‌ ರಿಗೆ ಮಾಹಿತಿ ಸೋರಿಕೆ ಆಗಿ ಸಿಕ್ಕಿಹಾಕಿಕೊಳ್ಳುತ್ತಾನೆ. ಬಳಿಕ ಅವನನ್ನು ಪ್ಯಾಪಿಲೋನ್‌ ಕೊಲ್ಲುತ್ತಾನೆ.

ಘಟನೆ 2
ಆಪ್ತ ಸ್ನೇಹಿತನನ್ನು ಕೊಂದ ಆರೋಪಕ್ಕೆ ಪ್ಯಾಪಿಲೋನ್‌ ಗೆ ಶಿಕ್ಷೆ ವಿಧಿಸಿ, ಜೋಸೆಫ್ ಐಲ್ಯಾಂಡ್‌ ಜೈಲಿಗೆ ಕಳುಹಿಸಲಾಗುತ್ತದೆ. ಅಲ್ಲಿ ಮೇಲಧಿಕಾರಿಗಳ ಮಗಳು ನೀರಿಗೆ ಬಿದ್ದಾಗ ರಕ್ಷಿಸಿದ್ದಕ್ಕಾಗಿ ಸನ್ನಡತೆಯ ಆಧಾರದಲ್ಲಿ ಪ್ಯಾಪಿಲೋನ್‌ಗೆ ಎಂಟು ವರ್ಷ ಕಠಿನ ಶಿಕ್ಷೆ ರದ್ದುಪಡಿಸಿ, ಮೊದಲಿನ ಜೈಲಿಗೆ ವರ್ಗಾಯಿಸಲಾಗುತ್ತದೆ.

ಘಟನೆ 3
ಹುಚ್ಚನಾದಂತೆ ನಾಟಕವಾಡುವ ಪ್ಯಾಪಿ ಲೋನ್‌ ಹುಚ್ಚಾಸ್ಪತ್ರೆ ಸೇರುತ್ತಾನೆ. ಅಲ್ಲಿಂದ ತಪ್ಪಿಸಿಕೊಳ್ಳಲು ಹೋಗಿ ಮತ್ತೆ ಜೈಲು ಸೇರುತ್ತಾನೆ. ಜೈಲಿನಿಂದ ತಪ್ಪಿಸಿಕೊಂಡು ಗುಯಾನ ದೇಶಕ್ಕೆ ಬಂದು ಅಲ್ಲಿ ಭಾರತೀಯ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಕೆಲ ದಿನಗಳ ಬಳಿಕ ಆಕೆಯಿಂದ ದೂರವಾಗಿ ಮತ್ತೇ ಪೋಲಿಸ್‌ ಬಂಧಿಯಾಗುತ್ತಾನೆ.  

ಶಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next