Advertisement

ಶತ್ರುಗಳನ್ನು ಎಂದಿಗೂ ನಂಬದಿರಿ: ಕಾರ್ಗಿಲ್‌ ವಿಜಯೋತ್ಸವಕ್ಕೆ ಜನರಲ್‌ ಮಲ್ಲಿಕ್‌ ಕಿವಿಮಾತು!

12:54 AM Jul 26, 2023 | Team Udayavani |

ಹೊಸದಿಲ್ಲಿ: “ಸದಾ ಜಾಗೃತರಾಗಿರಿ, ಎಂದಿಗೂ ನಿಮ್ಮ ಶತ್ರುಗಳನ್ನು ನಂಬದಿರಿ, ಆ ಶತ್ರು ಪಾಕಿಸ್ಥಾನವೇ ಆಗಿರಲಿ ಅಥವಾ ಚೀನವೇ ಆಗಿರಲಿ”…

Advertisement

ಲಡಾಖ್‌ನ ಹಿಮಗಾಳಿಯಲ್ಲಿ ಎದೆಗುಂದದೆ ನಿಂತು ರಾಷ್ಟ್ರವನ್ನು ರಕ್ಷಿಸುತ್ತಿರುವ ಸೇನಾ ಸಿಬಂದಿಗೆ ಈ ರೀತಿಯ ಕಿವಿಮಾತು ಹೇಳಿದವರು ಭಾರತೀಯ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್‌ ವೇದಾ ಪ್ರಕಾಶ್‌ ಮಲ್ಲಿಕ್‌.

1999ರ ಕಾರ್ಗಿಲ್‌ ಯುದ್ಧ ಸಂದರ್ಭದಲ್ಲಿ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಜನರಲ್‌ ಮಲ್ಲಿಕ್‌, ಬುಧವಾರ ನಡೆಯಲಿರುವ ಕಾರ್ಗಿಲ್‌ ವಿಜಯೋತ್ಸವದ ಅಂಗವಾಗಿ ಲಡಾಖ್‌ನ ದ್ರಾಸ್‌ನಲ್ಲಿ ಯೋಧರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಶತ್ರುರಾಷ್ಟ್ರವೊಂದು ರಾಜಕೀಯವಾಗಿ ನಮ್ಮ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತೋರ್ಪಡಿಸಿಕೊಂಡರೂ, ಒಪ್ಪಂದಗಳಿಗೆ ಸಹಿ ಹಾಕುವಂತ ಪ್ರದರ್ಶನಗಳು ಕಂಡರೂ, ನಾವೆಂದಿಗೂ ಅವರನ್ನು ನಂಬುವಂತಿಲ್ಲ.

ಶತ್ರು ಯಾರೇ ಆಗಿದ್ದರೂ ಸೇನಾಪಡೆಗಳು ಸದಾ ಎಚ್ಚರವಾಗಿರಬೇಕು. ಶತ್ರುಗಳು ಹೇಗೆ ಇರಲಿ, ಎಲ್ಲೇ ಅಡಗಿರಲಿ ಅವರನ್ನು ಬೆನ್ನಟ್ಟಿ ಸೆದೆಬಡೆವ ಸಾಮರ್ಥ್ಯ ಭಾರತದ ಸೇನಾಪಡೆಗಳಿಗಿದೆ ಎಂಬುದಕ್ಕೆ ಕಾರ್ಗಿಲ್‌ ವಿಜಯೋತ್ಸವವೇ ಸಾಕ್ಷಿ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next