ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸಿದ್ದು, ಭ್ರಷ್ಟಾಚಾರ, ರಾಜಕೀಯ ಹಿಂಸೆ, ಸುಲಿಗೆ, ಬಾಂಗ್ಲಾದೇಶಿಯರ ಒಳನುಸುಳುವಿಕೆ ಮುಂತಾದವನ್ನು ತೊಡೆದುಹಾಕಲು ತಯಾರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬೋಲ್ ಪುರದಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನನ್ನ ಜೀವನದಲ್ಲಿ ಹಲವಾರು ರೋಡ್ ಶೋಗಳಲ್ಲಿ ಭಾಗಿಯಾಗಿದ್ದೇನೆ ಮತ್ತು ಆಯೋಜಿಸಿದ್ದೇನೆ. ಆದರೇ ಹಿಂದೆಂದಿಗಿಂತಲೂ ಹೆಚ್ಚು ಈ ಬಾರಿ ಜನ ಸೇರಿದ್ದಾರೆ. ಈ ತೆರನಾದ ರೋಡ್ ಶೋವನ್ನು ಎಂದೂ ಕಂಡಿಲ್ಲ. ಇದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಜನರ ಆಕ್ರೋಶದ ಸಂಕೇತವಾಗಿದೆ. ಇಲ್ಲಿ ನೆರೆದಿರುವ ಜನಸ್ತೋಮ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಂಬಿಕೆಯಿಟ್ಟಿದೆ ಎಂದು ತಿಳಿಸಿದ್ದಾರೆ.
ಬಂಗಾಳದ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿತ್ವ ರವೀಂದ್ರ ನಾಥ್ ಟ್ಯಾಗೋರ್ ಅವರೊಂದಿಗೆ ನಿಕಟ ಭಾಂಧವ್ಯ ಹೊಂದಿರು ವಟ್ಟಣವಿದು. ಈ ಹಿಂದೆ ಬೆಂಗಾಲ್ ಆಫ್ ಗೋಲ್ಡ್ ಎಂದು ಕರೆಯುತ್ತಿದ್ದ ಇಲ್ಲಿನ ವೈಭವವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮರಳಿ ರೂಪಿಸಲಿದೆ ಎಂದು ತಿಳಿಸಿದ್ದಾರೆ.
ರೋಡ್ ಶೋ ನಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ರಸ್ತೆಯೂದ್ದಕ್ಕೂ ಜೈಶ್ರೀರಾಮ್, ನರೇಂದ್ರ ಮೋದಿ ಜಿಂದಾಬಾದ್, ಮತ್ತು ಅಮಿತ್ ಶಾ ಜಿಂದಾಬಾದ್ ಎಂಬ ಘೋಷಣೆಗಳು ಮೊಳಗಿದವು.