ದಾವಣಗೆರೆ: ಗುತ್ತಿಗೆ ಪದ್ಧತಿ ರದ್ದುಪಡಿಸಿ, ಹಾಲಿ ಕೆಲಸ ಮಾಡುತ್ತಿರುವವರ ಖಾಯಮಾತಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾ ಪೌರ ಹಾಗೂ ಕೊಳಚೆ ನಿರ್ಮೂಲನಾ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಸಂಘದ ನೇತೃತ್ವದಲ್ಲಿ ಪೌರ ಕಾರ್ಮಿಕರು ಸೋಮವಾರದಿಂದ ನಿರಂತರ ಧರಣಿ ಪ್ರಾರಂಭಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಉಚ್ಚ ನ್ಯಾಯಾಲಯವೇ ಗುತ್ತಿಗೆ ಕಾರ್ಮಿಕರ ಕಾಯಂಗೆ ಆದೇಶಿಸಿದೆ. ಸರ್ಕಾರವೂ ಭರವಸೆ ನೀಡಿತ್ತು. ಕಳೆದ ಆಗಸ್ಟ್‌ನಿಂದ ಸಮಾನ ಕೆಲಸಕ್ಕೆ ಸಮಾನ ವೇತನ… ಆದೇಶದಂತೆ ವೇತನ ನೀಡಲಾಗುತ್ತಿದೆ.
ಆದರೆ, ತ್ತಾದರೂ ಈವರೆಗೆ ಕಾಯಂ ಮಾಡಿಲ್ಲ. ಕೂಡಲೇ ಗುತ್ತಿಗೆ ಪದ್ಧತಿ ರದ್ದುಪಡಿಸಿ, ಈಗಾಗಲೇ ಕೆಲಸ ಮಾಡುತ್ತಿರುವನ್ನು ಖಾಯಂ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಗುತ್ತಿಗೆ ಪೌರ ಕಾರ್ಮಿಕರ ಕಾಯಂಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ರಚಿಸಿ,
-ವಿವಿಧ ರಾಜ್ಯದಲ್ಲಿನ ಪೌರ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿ ಆಧಾರದಲ್ಲಿ ವಿಶೇಷ ನಿಯಮದ ಮೂಲಕ ಖಾಯಂ ಮಾಡುವುದಾಗಿ ತಿಳಿಸಿದ್ದರು. ಮುಖ್ಯಮಂತ್ರಿಯವರ ಆದೇಶವನ್ನೂ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ. ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 30 ಜನರಿಗೆ ಕಳೆದ 6 ತಿಂಗಳನಿಂದ ಸಂಬಳ ಕೊಡದೇ ಸತಾಯಿಸಲಾಗುತ್ತಿದೆ. 6 ತಿಂಗಳ ಬಾಕಿ ವೇತನ ನೀಡುವ ಜೊತೆಗೆ ಅವರ ಜೀವನೋಪಾಯಕ್ಕಾಗಿ ಕೆಲಸಕ್ಕೆ ಮತ್ತೆ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿರಂತರ ಧರಣಿ ಪ್ರಾರಂಭಿಸಲಾಗಿದೆ. ಬೇಡಿಕೆ ಈಡೇರಿಸದಿದ್ದಲ್ಲಿ ಬೆಂಗಳೂರಿನ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ಮುಖಂಡರಾದ ಎಲ್. ಎಂ. ಹನುಮಂತಪ್ಪ, ಬಿ.ಎಚ್. ವೀರಭದ್ರಪ್ಪ, ಎನ್. ನೀಲಗಿರಿಯಪ್ಪ, ಕೆ.ಸಿ. ಪ್ರಕಾಶ್, ಎನ್. ಪರಶುರಾಮ್, ಸಂದೀಪ್, ಲೋಹಿತ್, ಎಚ್. ಶಿವು, ಗಿರಿಜಮ್ಮ, ಹನುಮಕ್ಕ, ನೇತ್ರಾವತಿ, ಸರಿತಾ, ದೇವಿರಮ್ಮ, ದೇವರಾಜ್, ಹನುಮಂತ, ಕಮಲಮ್ಮ, ಪ್ರಸಾದ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.