Advertisement

ಮೋದಿಯನ್ನು ವಿರೋಧಿಸುವುದಕ್ಕೋಸ್ಕರ ದೇಶವನ್ನೇ ವಿರೋಧಿಸುತ್ತಿದ್ದಾರೆ 

02:53 PM May 27, 2018 | Team Udayavani |

ಭಾಗ್‌ಪತ್‌ : ‘ಮೋದಿಯನ್ನು ವಿರೋಧಿಸುವುದಕ್ಕೋಸ್ಕರ ಕಾಂಗ್ರೆಸ್‌ನವರು ದೇಶವನ್ನೇ ವಿರೋಧಿಸಲು ಆರಂಭಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ಧಾಳಿ ನಡೆಸಿದ್ದಾರೆ. 

Advertisement

ಭಾನುವಾರ ಉತ್ತರಪ್ರದೇಶದ ಭಾಗ್‌ಪತ್‌ ನಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಕಾಂಗ್ರೆಸ್‌ ಮತ್ತು ಇತರ ವಿರೋಧಿ ಪಕ್ಷಗಳ ವಿರುದ್ಧ ಕಿಡಿ ಕಾರಿದರು. 

‘ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಸಾಂವಿಧಾನಿಕ ಸಂಸೆœಗಳಲ್ಲಿ ನಂಬಿಕೆ ಇಲ್ಲ. ಯಾವ ಕುಟುಂಬ 70 ವರ್ಷ ದೇಶವನ್ನಾಳಿದೆಯೋ ಅಂತಹವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ’ ಎಂದರು. 

‘ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಸರ್ಕಾರದಲ್ಲಿ ಕ್ರಿಮಿನಲ್‌ಗ‌ಳು ಅವರಾಗಿಯೇ ಬಂದು ಸರೆಂಡರ್‌ ಆಗುತ್ತಿದ್ದಾರೆ .ಇದು ನಾವು ಮಾಡಿರುವ ಬದಲಾವಣೆ’ ಎಂದರು. 

‘ರಾಜಕೀಯ ಮಾಡುವುದಕ್ಕೆ ಒಂದು ಮಿತಿ ಇದೆ. ಆದರೆ ಕಾಂಗ್ರೆಸ್‌ ಅದನ್ನೂ ಮೀರಿದೆ’ಎಂದರು. 

Advertisement

‘ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿದರೆ ಅದೂ ಅವರಿಗೆ ಜೋಕ್‌, ಎಲ್‌ಪಿಜಿ ಸಿಲಿಂಡರ್‌ ನೀಡಿದರೆ ಅದೂ ಜೋಕ್‌. ಬ್ಯಾಂಕ್‌ ಖಾತೆ ಮಾಡಿದರೆ ಅದೂ ಜೋಕ್‌. ವಂಶಪಾರಂಪರ್ಯದ ರಾಜಕಾರಣ ಮಾಡಿದವರಿಗೆ ಎಲ್ಲವೂ ಜೋಕ್‌ ಆಗಿ ಕಾಣುತ್ತದೆ’ ಎಂದು ಕಿಡಿ ಕಾರಿದರು. 

‘ಅವರಿಗೆ ಅವರ ಕುಟುಂಬವೇ ದೇಶವಾದರೆ ನನಗೆ ನನ್ನ ದೇಶವೇ ಕುಟುಂಬ’ ಎಂದರು. 

‘ದಲಿತರ ಕಲ್ಯಾಣಕ್ಕಾಗಿಯೂ ನಾವು ಯೋಜನೆಗಳನ್ನು ತಂದಿದ್ದು  ದೌರ್ಜನ್ಯ ತಡೆಗಾಗಿ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸಿದ್ದೇವೆ’ ಎಂದರು.

‘ಕಾಂಗ್ರೆಸ್‌ ದಲಿತರಿಗೆ ಸುಳ್ಳು ಹೇಳುತ್ತಿದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನೂ ಸುಳ್ಳು ಹೇಳುತ್ತಿದ್ದು, ಅದರಿಂದ ದೇಶದಲ್ಲಿ ಅಸ್ಥಿರತೆ ತರಲು ಯತ್ನಿಸುತ್ತಿದೆ’ ಎಂದು ಕಿಡಿ ಕಾರಿದರು.  

Advertisement

Udayavani is now on Telegram. Click here to join our channel and stay updated with the latest news.

Next