ಮಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಂಬಿಕೆಗೆ ಅರ್ಹರಲ್ಲ. ಅವರಿಗೆ ಬದ್ಧತೆಯಿಲ್ಲ. ಅವರೊಂದಿಗೆ ಹೊಂದಾಣಿಕೆ ಮಾಡುವುದು ಬೇಡ ಎಂದು ಬಿಜೆಪಿ ಹಿರಿಯರಿಗೆ ಹೇಳಿದ್ದೇನೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ವಿಧಾನಪರಿಷತ್ ನಲ್ಲಿ ಬಿಜೆಪಿಯೊಂದಿಗೆ ಸೇರಿ ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಮಾಡಿದರು. ಆದರೆ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದರು. ಹೀಗಾಗಿ ಅವರನ್ನು ನಂಬಬೇಡಿ ಎಂದು ನಮ್ಮ ಪಕ್ಷದವರಿಗೆ ಹೇಳುತ್ತೇನೆ. ಇದರಿಂದ ನಮ್ಮ ಪಕ್ಷದ ಬೆಳವಣಿಗೆಗೆ ಕಷ್ಟ ಎಂದರು.
ಇದನ್ನೂ ಓದಿ:ಬಿಜೆಪಿಗೆ ಲೈಫ್ ಕೊಟ್ಟೋನೆ ನಾನು
ಕುಮಾರಸ್ವಾಮಿ ಯಾರಿಗೆ ಬೇಕಾದರೂ ಸೂಕ್ತರಾಗುತ್ತಾರೆ. ಆ ಅರ್ಥದಲ್ಲಿ ಅವರು ಜೋಕರ್ ಎಂದು ಹೇಳಿದ್ದೇನೆ ಎಂದ ಅವರು ಕುಮಾರಸ್ವಾಮಿಗೆ ರಾಜಕೀಯ ಅಭದ್ರತೆ ಕಾಡುತ್ತಿದೆ. ಅದಕ್ಕೆ ಈಗ ಗ್ರಾಮ ಪಂಚಾಯತಿ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದಾರೆ ಎಂದು ಟೀಕಿಸಿದರು.
ಅವರು ನನಗೆ ಬಚ್ಚಾ ಎಂದರೆ ನನಗೇನು ವ್ಯತ್ಯಾಸವಾಗುದಿಲ್ಲ ಎಂದು ಯೋಗಶ್ವರ್, ಇಸ್ಪೀಟ್ ಆಟ ನನಗೆ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಮಲೇಶ್ಯಾ, ಸಿಂಗಾಪುರದಲ್ಲಿ ಇಸ್ಪೀಟ್, ಬೇರೆ ಗ್ಯಾಂಬ್ಲಿಂಗ್ ಆಡಿದ ಪೊಟೋ ನನ್ನ ಬಳಿ ಇದೆ ಎಂದರು.
ಇದನ್ನೂ ಓದಿ: ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ