ಚಿಕ್ಕಮಗಳೂರು : ಮೊಬೈಲ್ ನೆಟ್ ವರ್ಕ್, ವಿದ್ಯುತ್ ಸಮಸ್ಯೆ ಪರಿಣಾಮ ಗ್ರಾಮದ ಜನರಿಗೆ ಅಯುಷ್ಮಾನ್ ಕಾರ್ಡ್ ನೋಂದಣಿಯನ್ನು ಗ್ರಾಮದ ಬೆಟ್ಟದ ತುದಿಯಲ್ಲಿ ಆಯೋಜಿಸಲಾಗಿದೆ.
ಇದರಿಂದ ಗ್ರಾಮದ ಜನರು ಅಯುಷ್ಮಾನ್ ಕಾರ್ಡ್ ನೋಂದಣಿ ಮಾಡಬೇಕಾದರೆ ಗುಡ್ಡ ಹತ್ತಿ ಕೆಳಗೆ ಇಳಿಯಬೇಕಾದ ಪರಿಸ್ಥಿತಿ.
ಅಂದಹಾಗೆ ಈ ಸಮಸ್ಯೆ ತಲೆದೂರಿರುವುದು ಕಳಸ ತಾಲೂಕಿನ ಸಂಸೆ ಸಮೀಪದ ಕಾರ್ಲೆ-ಕಳಕೋಡು ಗ್ರಾಮದಲ್ಲಿ, ಇಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಹೇಳತೀರದಾಗಿದೆ, ನೆಟ್ ವರ್ಕ್ ಬರಬೇಕಾದರೆ ಗ್ರಾಮದಲ್ಲಿರುವ ಬೆಟ್ಟ ಹತ್ತಬೇಕು,
ಅದರಂತೆ ಧರ್ಮಸ್ಥಳ ಸಂಘದಿಂದ ಅಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿತ್ತು ಆದರೆ ಗ್ರಾಮದ ಜನರ ಹೆಸರು ನೋಂದಣಿ ಮಾಡಬೇಕಾದರೆ ನೆಟ್ ವರ್ಕ್ ಬೇಕು ಹಾಗಾಗಿ ಧರ್ಮಸ್ಥಳ ಸಂಘದ ಸದಸ್ಯರು ಬೆಟ್ಟದ ತುದಿಯಲ್ಲಿ ನೋಂದಣಿ ಕಾರ್ಯ ಹಮ್ಮಿಕೊಂಡಿದ್ದು ಗ್ರಾಮದ ಜನತೆಗೆ ತೊಂದರೆಯಾದರೂ ಸಂಘದ ಸದಸ್ಯರ ಕಾರ್ಯಕ್ಕೆ ಗ್ರಾಮದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅರುಣ್ ಸಿಂಗ್-ಯತ್ನಾಳ್ ಭೇಟಿ…: ಕುತೂಹಲ ಮೂಡಿಸಿದ ಆಂತರಿಕ ಮಾತುಕತೆ