Advertisement

ನೆಟ್ಟಣ: ಅಡಿಕೆ ಕಳವಿಗೆ ಯತ್ನ;  ಆರೋಪಿ ಬಂಧನ

11:17 AM Apr 14, 2017 | |

ಕಡಬ: ನೆಟ್ಟಣ ಪೇಟೆಯಲ್ಲಿ  ಕಳೆದ ಕೆಲವು ದಿನಗಳ ಹಿಂದೆ ಸತ್ತಾರ್‌ ಅವರಿಗೆ ಸೇರಿದ ಅಡಿಕೆ ಗೋದಾಮಿನ ಬಾಗಿಲು ಮುರಿದು ಅಡಿಕೆ ಕಳ್ಳತನಕ್ಕೆ ಯತ್ನಿಸಿದ್ದ  ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬರಾಯ ನಿವಾಸಿ ಮಹಮ್ಮದ್‌ ಇಸಾಕ್‌ (32)ನನ್ನು  ಕಡಬ ಪೊಲೀಸರು ಬುಧವಾರ ಬಂಧಿಸಿದ್ದಾರೆ.

Advertisement

ಎ.6ರಂದು ಮುಂಜಾನೆ ಮಾರುತಿ ಕಾರಿನಲ್ಲಿ ಆಗಮಿಸಿದ್ದ ಕಳ್ಳರು ಗೋದಾಮಿನ ಬಾಗಿಲನ್ನು ಮುರಿಯುವ ಶಬ್ದ ಕೇಳಿ ಮಾಲಕ ಸತ್ತಾರ್‌ ಆಗಮಿಸಿದಾಗ 2 ಚೀಲ ಅಡಿಕೆಯೊಂದಿಗೆ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಬಂಧಿತ ಆರೋಪಿಯ ಮೇಲೆ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಬಣಕಲ್‌ ಪೊಲೀಸ್‌ ಠಾಣೆ, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಬಾರ್‌ ಕಳ್ಳತನ ಪ್ರಕರಣ, ಬೇಲೂರು ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪೆಟ್ರೋಲ್‌ ಪಂಪ್‌ನಲ್ಲಿ ನಡೆದ ಕಳವು ಪ್ರಕರಣ, ದ.ಕ. ಜಿಲ್ಲೆಯ ಬೆಳ್ತಂಗಡಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪೆಟ್ರೋಲ್‌ ಪಂಪ್‌ನಲ್ಲಿ ಕಳ್ಳತನ  ಮತ್ತು ಅಡಿಕೆ ಕಳ್ಳತನ, ಪುಂಜಾಲಕಟ್ಟೆ , ವೇಣೂರು ಮತ್ತು ಬಂಟ್ವಾಳ ಗ್ರಾಮಾಂತರ, ಕಡಬ, ಉಪ್ಪಿನಂಗಡಿ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಕೇಸು ದಾಖಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷನ್‌ ಗುಲಾಬ್‌ ರಾವ್‌ ಬೋರಸೆ ನಿರ್ದೇಶನದಲ್ಲಿ  ಹೆಚ್ಚು ವರಿ ಪೊಲೀಸ್‌ ಅಧೀಕ್ಷಕ ಡಾ| ವೇದಮೂರ್ತಿ, ಪುತ್ತೂರು ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷಕ ಎನ್‌.ಜಿ. ಭಾಸ್ಕರ ರೈ ಅವರ ಮಾರ್ಗದರ್ಶನದಲ್ಲಿ  ಪುತ್ತೂರು ಗ್ರಾ. ಪೊಲೀಸ್‌ ವೃತ್ತ ನಿರೀಕ್ಷಕ ಅನಿಲ್‌ ಎಸ್‌. ಕುಲಕರ್ಣಿ ಯವರ ಸಲಹೆಯಂತೆ  ಕಡಬ ಠಾಣಾ ಉಪ ನಿರೀಕ್ಷಕ  ಪ್ರಕಾಶ್‌ ದೇವಾಡಿಗ, ಎ.ಎಸ್‌.ಐ. ಚಂದ್ರ ಶೇಖರ, ಸಿಬಂದಿ ಮೋನಪ್ಪ, ಮೋಹನ್‌, ಶಿವ ಪ್ರಸಾದ್‌, ಸತೀಶ್‌, ಪ್ರಕಾಶ್‌, ಶರತ್‌ ಕುಮಾರ್‌, ವಾಹನ ಚಾಲಕ ಕನಕರಾಜ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
 

Advertisement

Udayavani is now on Telegram. Click here to join our channel and stay updated with the latest news.

Next