Advertisement

ಯುವ ಬ್ರಿಗೇಡ್‌ನಿಂದ ನೇತ್ರಾವತಿ ಸ್ವಚ್ಛತಾ ಕಾರ್ಯ

04:23 PM Jun 04, 2018 | Team Udayavani |

ಬೆಳ್ತಂಗಡಿ : ಯುವ ಬ್ರಿಗೇಡ್‌ ನೇತೃತ್ವದಲ್ಲಿ ರವಿವಾರ ಬೆಳಗ್ಗೆ 6ರಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ- ಡ್ಯಾಂವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ರಾಜ್ಯದ ವಿವಿಧ ಪ್ರದೇಶಗಳ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸ್ವಚ್ಛತಾ ಕಾರ್ಯ ನಡೆಸಿದರು. ಮುಖ್ಯವಾಗಿ ಭಕ್ತರು ಎಸೆಯುವ ದೇವರ ಫೋಟೋಗಳು, ವಿಗ್ರಹಗಳನ್ನು ವಿಶೇಷವಾಗಿ ಸಂಗ್ರಹಿಸಲಾಯಿತು. ಫೋಟೋ ಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಯಿತು.

Advertisement

ಬಟ್ಟೆಗಳ ರಾಶಿ
ಸ್ನಾನಘಟ್ಟದಲ್ಲಿ ಲೋಡ್‌ಗಟ್ಟಲೆ ಬಟ್ಟೆಗಳ ರಾಶಿ ಕಂಡುಬಂತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಟ್ಟೆ ಬರೆಗಳನ್ನು, ಇತರ ವಸ್ತುಗಳನ್ನು ಬೇಕಾಬಿಟ್ಟಿ ಎಸೆದಿದ್ದು, ಸ್ವಚ್ಛತಾ ಕಾರ್ಯ ನಡೆಸಲಾಯಿತು. ರಾಜ್ಯದ ವಿವಿಧ ಭಾಗಗಳ ಜನತೆ ಆಗಮಿಸಿದ್ದು, ವಿವಿಧ ಪ್ರಮುಖ ಹುದ್ದೆಗಳಲ್ಲಿದ್ದರೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಮಾದರಿಯಾದರು.

ಸ್ವಚ್ಛತಾ ಸ್ಥಳಕ್ಕೆ ಶ್ರಿಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇನ್ದ್ರ ಕುಮಾರ್‌, ಸುಪ್ರಿಯಾ ಹರ್ಷೇನ್ದ್ರ ಕುಮಾರ್‌ ಭೇಟಿ ನೀಡಿದರು. ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್‌ ಮುಖಂಡರು, ಕಾರ್ಯಕರ್ತರು ಮೊದಲಾದವರು ಭಾಗವಹಿಸಿದ್ದರು.

ಜವಾಬ್ದಾರಿ
ರಾಜ್ಯದ 150ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತೆ ನಡೆಸಲಾಗಿದೆ. 2ರಿಂದ 3 ಸಾವಿರ ಮಂದಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ತಾ|, ಜಿಲ್ಲಾ ಮಟ್ಟಗಳಲ್ಲೂ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಕಾವೇರಿ, ನಂದಿನಿ ನದಿ ಸ್ವಚ್ಛತಾ ಕಾರ್ಯ ನಡೆಸಿದ್ದು, ಇದೀಗ ರಾಜ್ಯಮಟ್ಟದಲ್ಲಿ ನೇತ್ರಾವತಿ
ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಜನತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಜನತೆಗೆ ತಮ್ಮ ಜವಾಬ್ದಾರಿಯ ಅರಿವಾದಾಗ ನದಿತೀರಗಳ ಸ್ವಚ್ಛ ತೆ ಸಾಧ್ಯ.
– ಚಂದ್ರಶೇಖರ್‌
ಯುವ ಬ್ರಿಗೇಡ್‌ ರಾಜ್ಯ ಸಂಚಾಲಕ

ಸಮಾಜಕ್ಕೆ ಕೊಡುಗೆ
ಕಳೆದ 4 ವರ್ಷಗಳಿಂದ ಯುವ ಬ್ರಿಗೇಡ್‌ನ‌ಲ್ಲಿದ್ದು, ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಸಮಾಜ ನಮಗೆ ಎಲ್ಲವನ್ನೂ ನೀಡುತ್ತದೆ. ಅದೇ ರೀತಿ ಸಮಾಜಕ್ಕೆ ನಾವು ಕೊಡುಗೆ ನೀಡುವುದು ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಸಮಾಜದಲ್ಲಿ ನಮ್ಮ ಕರ್ತವ್ಯ ಅರಿತು ಸ್ವಚ್ಛತೆ ಮಾಡಬೇಕು. ಇದು ಸಮಾಜಕ್ಕೆ ಕೊಡುಗೆ ನೀಡಲು ಇರುವ ಉತ್ತಮ ವೇದಿಕೆ.
– ಮನೋಜ್‌ ಬೆಂಗಳೂರು
ಖಾಸಗಿ ಕಂಪನಿ ಉದ್ಯೋಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next