Advertisement

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ”ಎನ್ನುತ್ತಿರುವ ನೆಟ್ಟಿಗರು

02:41 PM Nov 30, 2021 | Team Udayavani |

ಬೆಂಗಳೂರು: ವಿಶ್ವದೆಲ್ಲೆಡೆ ಈಗ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಸದ್ದು ಮಾಡುತ್ತಿದ್ದು, ಸಾಕಷ್ಟು ಜನರಿಗೆ ವೈರಸ್ ಸೋಂಕು ತಗಲುವ ಆತಂಕಕ್ಕಿಂತ ಲಾಕ್ ಡೌನ್ ಭಯವೇ ಹೆಚ್ಚು ಕಾಡುತ್ತಿದೆ. ಬೂಸ್ಟರ್ ಡೋಸ್ ಬಗ್ಗೆ ಸಾಮಾಜಿಕ ಜಾಲತಾಣ ಕೂ ನಲ್ಲಿ ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಆತ್ಮೀಯ ಪ್ರಧಾನಿ ಸಾರ್, ನಾನು ನಿಮ್ಮ ದೊಡ್ಡ ಅಭಿಮಾನಿ ಆದರೆ, ಈ ಹೊಸ ವೈರಸ್‌ನಿಂದಾಗಿ ಇನ್ನು ಮುಂದೆ ಯಾವುದೇ ಲಾಕ್‌ ಡೌನ್ ಅನ್ನು ಜಾರಿಗೊಳಿಸದಂತೆ ನಾನು ವಿನಂತಿಸುತ್ತೇನೆ. ನಾವು ಈಗ ಹೆಚ್ಚು ಬಲಿಷ್ಠರಾಗಿದ್ದೇವೆ. ನಾವು ವೈರಸ್‌ ನೊಂದಿಗೆ ಎರಡು ಬಾರಿ ಹೋರಾಡಿದ್ದೇವೆ ಮತ್ತು ಎರಡೂ ಬಾರಿಯೂ ವಿಜಯಶಾಲಿಯಾಗಿದ್ದೇವೆ. ಈ ಬಾರಿಯೂ ಅದನ್ನು ಸೋಲಿಸುತ್ತೇವೆ ಎಂದು ಕುಂದನ್ ಭಗವತಿ ಎನ್ನುವವರು ಕೂ ಮಾಡಿದ್ದಾರೆ.

ಇದನ್ನೂ ಓದಿ:ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

Koo App

#boosterforindia dear prime minister sir, I am a big fan of yours but, having said that, I request you not to implement any more lockdown because of this new virus. We are strong, we have fought with the virus twice & were victorious both the time. We will defeat it this time also hands down. #narendramodi #bharatmatakijai

Advertisement

Kundan Bhagwati (@Kundan_Bhagwati) 30 Nov 2021

ಮತ್ತೆ ಕಟ್ಟು ನಿಟ್ಟಿನ ಕ್ರಮ.. ಮತ್ತೆ ಅದೇ ಬಂಧನದ ಬದುಕು. ಇನ್ನೆಷ್ಟು ವರ್ಷ ಇದೇ ರೀತಿ ನಡೆಯುವುದೋ ದೇವರೇ ಬಲ್ಲ. ಮಾನವ ಮಾಡುವ ತಪ್ಪಿಗೆ ಇಡೀ ಜನಾಂಗವೇ ನರಳಬೇಕಾದ ಪರಿಸ್ಥಿತಿ ಎಂದು ಮಹೇಶ್ ಕುಮಾರ್ ಅವರು ಕೂ ಮಾಡಿದ್ದಾರೆ.

ಬೂಸ್ಟರ್ ಅಗತ್ಯವಿದ್ದರೆ ಮಾತ್ರ ಅದನ್ನು ನೀಡಬೇಕು, ಭಾರತೀಯರು ಯುರೋಪಿಯನ್ ಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ ಎಂದಿದ್ದಾರೆ ಸತ್ರಾಜಿತ್ ಸೇನ್ ಗುಪ್ತಾ .

Advertisement

Udayavani is now on Telegram. Click here to join our channel and stay updated with the latest news.

Next