Advertisement

ನೆದರ್ಲೆಂಡ್‌ ಶೂಟೌಟ್‌; ಬೆಲ್ಜಿಯಂಗೆ ಮೊದಲ ಕಿರೀಟ

06:40 AM Dec 17, 2018 | Team Udayavani |

ಭುವನೇಶ್ವರ: ರೆಡ್‌ ಲಯನ್ಸ್‌ ಖ್ಯಾತಿಯ ಬೆಲ್ಜಿಯಂ ಮೊದಲ ಬಾರಿಗೆ ವಿಶ್ವಕಪ್‌ ಹಾಕಿ ಪ್ರಶಸ್ತಿಯನ್ನು ಗೆದ್ದು ಮೆರೆದಿದೆ. ರವಿವಾರ ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ಸಾಗಿದ ತೀವ್ರ ಪೈಪೋಟಿಯ ಫೈನಲ್‌ನಲ್ಲಿ ಅದು 3-2 ಗೋಲುಗಳಿಂದ ನೆದರ್ಲೆಂಡ್‌ ತಂಡವನ್ನು ಶೂಟೌಟ್‌ನಲ್ಲಿ ನೆಲಕ್ಕುರುಳಿಸಿತು.

Advertisement

ಇದು ಬೆಲ್ಜಿಯಂಗೆ ಒಲಿದ ಮೊದಲ ಹಾಕಿ ವಿಶ್ವಕಪ್‌ ಪ್ರಶಸ್ತಿ. ಬೆಲ್ಜಿಯಂ ಕೇವಲ ಫೈನಲ್‌ ಅಲ್ಲ, ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿದ್ದು ಕೂಡ ಇದೇ ಮೊದಲ ಸಲವಾಗಿತ್ತು. ಮೊದಲ ಪ್ರಶಸ್ತಿ ಕಾಳಗದಲ್ಲೇ ಕಿರೀಟ ಏರಿಸಿಕೊಂಡು ಮೆರೆದಾಡಿತು. 4ನೇ ಸಲ ಟ್ರೋಫಿ ಎತ್ತುವ ಡಚ್ಚರ ಕನಸು ಕಮರಿ ಹೋಯಿತು. ಅಷ್ಟೇ ಅಲ್ಲ, ಸತತ 2 ಫೈನಲ್‌ನಲ್ಲೂ ನೆದರ್ಲೆಂಡಿಗೆ ಅದೃಷ್ಟ ಕೈಕೊಟ್ಟಿತು. 

ಕಳೆದ ಸಲ ತವರಿನ ಹೇಗ್‌ ಫೈನಲ್‌ನಲ್ಲಿ ನೆದರ್ಲೆಂಡ್‌ ಆಸ್ಟ್ರೇಲಿಯಕ್ಕೆ ಶರಣಾಗಿತ್ತು.ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಪ್ರಬಲ ಪೈಪೋಟಿ ನೀಡಿದ್ದರಿಂದ ಗೋಲುಗಳ ಬರಗಾಲ ಕಾಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್‌ ಮೂಲಕ ಚಾಂಪಿಯನ್ನರನ್ನು ನಿರ್ಧರಿಸುವುದು ಅನಿವಾರ್ಯವಾಯಿತು. ಇದರಲ್ಲಿ ಬೆಲ್ಜಿಯಂ 3-2 ಗೋಲುಗಳ ಅದೃಷ್ಟದ ಗೆಲುವನ್ನು ಒಲಿಸಿಕೊಂಡಿತು. ಬೆಲ್ಜಿಯಂ ಪರ ಫ್ಲೋರೆಂಟ್‌ ವಾನ್‌ ಔಬೆಲ್‌, ವಿಕ್ಟರ್‌ ವಿಗ್ನೆಝ್ ಮತ್ತು ಫೆಲಿಕ್ಸ್‌ ಡಿನಯೆರ್‌ ಗೋಲು ಸಿಡಿಸಿದದರು.

Advertisement

Udayavani is now on Telegram. Click here to join our channel and stay updated with the latest news.

Next