Advertisement

ಹೀಗೊಂದು ಫಾರಿನ್ ಪ್ರೇಮ್ ಕಹಾನಿ: ಸತಿ-ಪತಿಗಳಾದ ನೆದರ್ ಲ್ಯಾಂಡ್ ಯುವಕ ಮೈಸೂರು ಯುವತಿ

09:55 AM Nov 04, 2019 | Hari Prasad |

ಮೈಸೂರು: ಇದು ನೆದರ್ ಲ್ಯಾಂಡ್ ಮತ್ತು ಮೈಸೂರು ನಡುವೆ ವಿವಾಹ ಬಾಂಧವ್ಯ ಬೆಸೆದ ಕಥೆ. ಎರಡು ದೇಶಗಳ ನಡುವೆ ನೆಂಟಸ್ತನ ಬೆಳೆಯಲು ಕಾರಣವಾಗಿರುವ ದಂಪತಿಯ ಪ್ರೇಮಗಾಥೆ ಅರಳಿದ್ದು ದೂರದ ನೆದರ್ ಲ್ಯಾಂಡಲ್ಲಿ. ಹಾಲೆಂಡ್ ನ ಯುವಕ ಮತ್ತು ಮೈಸೂರಿನ ಯುವತಿಯ ನಡುವೆ ಅರಳಿದ ಪ್ರೇಮ ಇಂದು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಸಂಬಂಧವೊಂದರ ಪ್ರಾರಂಭವಾಗಿದೆ.

Advertisement

ನೆದರ್ ಲ್ಯಾಂಡ್ ನ ರೆನವ್ಯಾನ್ ಬೋಗರ್ಟ್ ಮತ್ತು ಮೈಸೂರಿನ ಅನು ಎಸ್. ಶೆಟ್ಟರ್ ಅವರೇ ಎರಡು ದೇಶಗಳ ನಡುವಿನ ವಿವಾಹ ಸಂಬಂಧಕ್ಕೆ ಸಾಕ್ಷಿಯಾದ ನವಜೋಡಿಗಳಾಗಿದ್ದಾರೆ. ಭಾರತೀಯ ಸಂಪ್ರದಾಯದ ಪ್ರಕಾರ ಈ ನೂತನ ಜೋಡಿಯ ವಿವಾಹ ಆರತಕ್ಷತೆ ಕಾರ್ಯಕ್ರಮವು ನಗರದ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಿತು.

ಈ ವಿಶೇಷ ವಿವಾಹ ಸಮಾರಂಭಕ್ಕೆ ವರನ ಕಡೆಯಿಂದ ಸುಮಾರು 40 ಜನ ನೆಂಟರು ಆಗಮಿಸಿದ್ದರು ಈ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಎರಡೂ ದೇಶಗಳ ವಿಭಿನ್ನ ಸಂಸ್ಕೃತಿ ಸಮಾಗಮಗೊಂಡಿತು.

ವಧು ಅನು ಶೆಟ್ಟರ್ ಅವರು ಮೈಸೂರಿನ ಎಂ. ಎಸ್ ಸುಮನಾ  ಹಾಗೂ ರಾಮರವೀಂದ್ರ ಅವರ ಪುತ್ರಿಯಾಗಿದ್ದಾರೆ. ವಿವಾಹ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯದ ಆಚರಣೆಗಳನ್ನು ಕಂಡ ವಿದೇಶಿ ನೆಂಟರು ಖುಷಿಪಟ್ಟರು.


Advertisement
Advertisement

Udayavani is now on Telegram. Click here to join our channel and stay updated with the latest news.

Next