ಆಮ್ಸ್ಟೆರ್ ಡ್ಯಾಮ್ : ಕೋವಿಡ್ ಬಿಕ್ಕಟ್ಟಿನ ನಡುವೆ ಭಾರತದ ಸೀರಂ ಇನ್ಸ್ ಟಿಟ್ಯೂಟ್ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪ್ರಯಾಣಿಕರಿಗೆ ನೀಡಲು ಯುರೋಪ್ ನ 7 ದೇಶಗಳು ಸೇರಿದಂತೆ ಒಟ್ಟು 9 ದೇಶಗಳು ಗ್ರೀನ್ ಪಾಸ್ ಪೋರ್ಟ್ ಪಟ್ಟಿಗೆ ಸೇರ್ಪಡೆ ಮಾಡಿದ ಬೆನ್ನಿಗೆ ಈಗ ಐರೋಪ್ಯ ಒಕ್ಕೂಟದ ಮತ್ತೊಂದು ರಾಷ್ಟ್ರ ಇಂದು(ಶುಕ್ರವಾರ, ಜುಲೈ 2) ಅನುಮೋದನೆ ನೀಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ನ ವರದಿ ತಿಳಿಸಿದೆ.
ಪ್ರಯಾಣಿಕರಿಗೆ ಕೋವಿಡ್ 19 ಕೋವಿಶೀಲ್ಡ್ ಲಸಿಕೆಯನ್ನು ನೀಡಲು ಐರೋಪ್ಯ ಒಕ್ಕೂಟಕ್ಕೆ ಸೇರುವ ನೆದರ್ ಲ್ಯಾಂಡ್ ಅನುಮೋದಿಸಿದೆ. ಕೋವಿಶೀಲ್ಡ್ ಲಸಿಕೆಯೊಂದಿಗೆ ಮಾಡೆರ್ನಾ, ಫೈಜರ್ ಹಾಗೂ ಜಾನ್ ಸನ್ ಆ್ಯಂಡ್ ಜಾನ್ ಸನ್ ಲಸಿಕಗಳನ್ನು ಕೂಡ ನೆದರ್ ಲ್ಯಾಂಡ್ ಗ್ರೀನ್ ಪಾಸ್ ಪೋರ್ಟ್ ಪಟ್ಟಿಗೆ ಸೇರ್ಪಡೆ ಮಾಡಿರುವುದಾಗಿ ಅಲ್ಲಿನ ಸರ್ಕಾರದ ಅಧಿಕೃತದ ವೆಬ್ ಸೈಟ್ ತಿಳಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಜಿಎಸ್ ಟಿ ಪರಿಹಾರ ಬಾಕಿ ಬಿಡುಗಡೆಗೆ ಮನವಿ ಮಾಡಿದ ಬೊಮ್ಮಾಯಿ
ಆಸ್ಟ್ರಿಯಾ, ಜರ್ಮನಿ, ಸ್ಲೋವೇನಿಯಾ, ಗ್ರೀಕ್, ಐಸ್ ಲ್ಯಾಂಡ್, ಐರ್ಲ್ಯಾಂಡ್, ಸ್ಪೇನ್, ಎಸ್ಟೋನಿಯಾ ಮತ್ತು ಸ್ವಿಟ್ಜರ್ ರ್ಲೆಂಡ್ ಸೇರಿದಂತೆ ಏಳು ದೇಶಗಳು ಕೋವಿಶೀಲ್ಡ್ ಲಸಿಕೆಯನ್ನು ಗ್ರೀನ್ ಪಾಸ್ ಪಟ್ಟಿಗೆ ಸೇರ್ಪಡೆಗೊಳಿಸಿದ್ದವು. ಈಗ ಈ ಸಾಲಿಗೆ ನೆದರ್ ಲ್ಯಾಂಡ್ ಕೂಡ ಸೇರ್ಪಡೆಗೊಂಡಿದೆ.
ಮುಖ್ಯವಾಗಿ ಭಾರತ ಸರ್ಕಾರದ ಎಲ್ಲಾ ಲಸಿಕೆಗಳಿಗೂ ಮಾನ್ಯತೆ ನೀಡುವುದಾಗಿ ಖಚಿತಪಡಿಸಿರುವ ಎಸ್ಟೋನಿಯಾ, ಭಾರತದಿಂದ ಪ್ರಯಾಣಿಕರು ಎಸ್ಟೋನಿಯಾಕ್ಕೆ ಪ್ರಯಾಣಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಪಡೆದ ವ್ಯಕ್ತಿಗಳು ಎಸ್ಟೋನಿಯಾಕ್ಕೆ ಭಾರತದಿಂದ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ : ಆರ್ಥಿಕ ವರ್ಷ 2021 ರ ಮೊದಲ ತ್ರೈಮಾಸಿಕದಲ್ಲಿ ಅತ್ಯಧಿಕ ರಫ್ತು : ಪಿಯೂಷ್ ಗೋಯಲ್