ನೆದರ್‌ಲ್ಯಾಂಡ್: ಕೋವಿಡ್ 19 ವೈರಸ್ ಜಗತ್ತಿನಾದ್ಯಂತ ಸಾರಾರು ಮಂದಿಯ ಪ್ರಾಣ ತೆಗೆದಿದೆ. ಆದರೆ ನೆದರ್‌ಲ್ಯಾಂಡ್ ನ ಈ ಅಜ್ಜಿ ಕೋವಿಡ್ 19 ವಿರುದ್ಧ ಜಯ ಸಾಧಿಸಿದ್ದಾಳೆ. 101ನೇ ವರ್ಷದಲ್ಲೂ ಈ ಕಾಯಿಲೆ ವಿರುದ್ಧ ಗೆದ್ದು ಬಂದಿದ್ದು ವೈದ್ಯರನ್ನೂ ಅಚ್ಚರಿಗೊಳಿಸಿದೆ..
ಇನ್ನೂ ಒಂದು ಆಶ್ವರ್ಯದ ಸಂಗತಿ ಎಂದರೆ ಈಕೆ ಹುಟ್ಟಿದ್ದು ಸ್ಪೇನ್ ಫ್ಲೂ ವ್ಯಾಪಕವಾಗಿದ್ದ ಸಂದರ್ಭ. 1919ರಲ್ಲಿ ಅಜ್ಜಿ ಹುಟ್ಟಿದ್ದು, ಮನೆಯಲ್ಲೇ ಒಬ್ಬಳೇ ಇದ್ದಳಂತೆ. ಕೋವಿಡ್ 19 ವೈರಸ್ ತಗುಲಿದರೂ ಆಕೆ ಎದೆಗುಂದದೆ ಆಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲದೇ ವೈದ್ಯರ ಚಿಕಿತ್ಸೆಗೆ ಚೆನ್ನಾಗಿಯೇ ಸ್ಪಂದಿಸುತ್ತಿದ್ದಳು.
ಈಕೆಯನ್ನು ರೊಟರ್ ಡ್ಯಾಮ್‌ನ ಜೆಸ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದಿಂದ ಆಕೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಬಳಿಕ ಕೋವಿಡ್ 19 ಪೊಸಿಟಿವ್ ಎಂದು ವರದಿ ಬಂದಿತ್ತು. ಐಸೋಲೇಷನ್ ವಾರ್ಡ್ ನಲ್ಲೂ ಅಜ್ಜಿ ಚುರುಕಾಗಿದ್ದಳಂತೆ. ಆಕೆ ಮನೆಯಲ್ಲಿ ಒಂಟಿಯಾಗಿ ಜೀಸುತ್ತಿದ್ದರಿಂದಲೋ ಏನೋ,ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳೂ ಕಂಡುಬಂದಿರಲಿಲ್ಲ. ಆಕೆ ಆಸ್ಪತ್ರೆಯಲ್ಲಿ ಚೆನ್ನಾಗಿ ಶ್ರಾಂತಿ ತೆಗೆದುಕೊಂಡಿದ್ದು, ಮನೆಗೆ ಹೋಗಲು ತಯಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಅಜ್ಜಿಯನ್ನು ಭಾರತೀಯ ಮೂಲದ ವೈದ್ಯ ಸುನಿಲ್ ರಾಮಲಾಲ್ ಎಂಬವರು ನೋಡಿಕೊಂಡಿದ್ದು ಅಜ್ಜಿಯನ್ನು ನೋಡಿ ಅವಕ್ಕಾಗಿದ್ದೆ ಎಂದು ಹೇಳಿದ್ದಾಳೆ. ಅಜ್ಜಿ ಅಂಜುವ ಸ್ವಭಾವವನ್ನೇ ಹೊಂದಿರಲಿಲ್ಲ. ಪ್ರತಿಯೊಂದನ್ನೂ ಆಕೆ ಪಾಲಿಸುತ್ತಿದ್ದಳು. ಆಕೆ ಸೀನುತ್ತಿದ್ದಾಗ ಮತ್ತು ವೈದ್ಯರು, ದಾದಿಯರು ಹತ್ತಿರದ್ದರೆ ದೂರ ಹೋಗಲು, ತಮ್ಮನ್ನು ರಕ್ಷಿಸಿಕೊಳ್ಳಲು ಹೇಳುತ್ತಿದ್ದಳು ಎಂದು ಅವರು ಹೇಳಿದ್ದಾರೆ.