ನವದೆಹಲಿ: ನೆಟ್ ಫ್ಲಿಕ್ಸ್ ಚಂದಾದಾರರ ಸಂಖ್ಯೆ ಇಳಿಕೆಯಾಗುತ್ತಿರುವುದು ಮುಂದುವರಿದಿದ್ದು, 2022ರ ಎರಡನೇ ತ್ರೈಮಾಸಿಕ ವರದಿಯನ್ನು ಕಂಪನಿ ಬಿಡುಗಡೆಗೊಳಿಸಿದ್ದು, ಕಳೆದ ಏಪ್ರಿಲ್ ತಿಂಗಳಿನಿಂದ ಸುಮಾರು ಹತ್ತು ಲಕ್ಷ ಚಂದಾದಾರರನ್ನು ಕಳೆದುಕೊಂಡಿದ್ದು, ಆದಾಯದಲ್ಲಿ ಕುಸಿತ ಕಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೇಳೂರು: ಉದಯವಾಣಿ ದಿನಪತ್ರಿಕೆಗಾಗಿ ಕಾಯುವ ನಾಯಿ; ವಿಡಿಯೋ ವೈರಲ್
ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ನೆಟ್ ಫ್ಲಿಕ್ಸ್ ಒಟಿಟಿ ಫ್ಲ್ಯಾಟ್ ಫಾರಂ ಚಂದಾದಾರರ ಸಂಖ್ಯೆ ಇಳಿಮುಖವಾಗುತ್ತಿದ್ದು, ಇದು ನೆಟ್ ಫ್ಲಿಕ್ಸ್ ಇತಿಹಾಸದಲ್ಲೇ ಮೊದಲು ಎಂದು ಹೇಳಿದೆ. ಜೂನ್ ತ್ರೈಮಾಸಿಕದಲ್ಲಿ ಸುಮಾರು 9,70,000 Paid ಚಂದಾದಾರರನ್ನು ಕಳೆದುಕೊಂಡಿರುವುದಾಗಿ ವರದಿಯಲ್ಲಿ ವಿವರಿಸಿದೆ.
ಸುಮಾರು 20 ಲಕ್ಷ ಚಂದಾದಾರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದ್ದು, ಅದರ ಅರ್ಧದಷ್ಟು ಚಂದಾದಾರರನ್ನು ಕಳೆದುಕೊಂಡಿದ್ದೇವೆ. 2022ರ ಮೊದಲ ತ್ರೈಮಾಸಿಕದಲ್ಲಿ 2 ಲಕ್ಷ Paid ಚಂದಾದಾರರನ್ನು ಕಳೆದುಕೊಂಡಿತ್ತು.
ಪ್ರಸ್ತುತ ಜಗತ್ತಿನಾದ್ಯಂತ ನೆಟ್ ಫ್ಲಿಕ್ಸ್ 220.67 ಮಿಲಿಯನ್ Paid ಚಂದಾದಾರರನ್ನು ಹೊಂದಿರುವುದಾಗಿ ವರದಿ ತಿಳಿಸಿದೆ. ಮುಂದಿನ ತ್ರೈಮಾಸಿಕದಲ್ಲಿ ಒಂದು ಮಿಲಿಯನ್ ಚಂದಾದಾರರು ಹೆಚ್ಚಳವಾಗುವ ನಿರೀಕ್ಷೆ ಇದ್ದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.