ನವದೆಹಲಿ: ದೇಶದ ಏಳು ಮಹಿಳಾ ಸಾಧಕಿಯರ ಜೀವನಗಾಥೆಯನ್ನು ಶಾರ್ಟ್ ಫಿಲಂ ರೂಪದಲ್ಲಿ ನಿರ್ಮಿಸಲಾಗಿದ್ದು, ಅದನ್ನು ನೆಟ್‌ಫ್ಲಿಕ್ಸ್ ಸಂಸ್ಥೆಯು ಭಾರತೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಕಾರದೊಂದಿಗೆ ಮಂಗಳವಾರ ಬಿಡುಗಡೆ ಮಾಡಿದೆ.
ಸಚಿವ ಅನುರಾಗ್ ಠಾಕೂರ್ ಅವರು “ಸೆವೆನ್ ಚೇಂಜ್‌ಮೇಕರ್’ ಶಾರ್ಟ್ ಫಿಲಂಗಳನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ನೆಟ್‌ಫ್ಲಿಕ್ಸ್‌ನೊಂದಿಗಿನ ಸರ್ಕಾರದ ಒಪ್ಪಂದಕ್ಕೂ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ:ಗುಣಮುಖವಾಗದ ಕಾಯಿಲೆ, ಮದುವೆಯಾಗದ ಕೊರಗು : ನೇಣು ಬಿಗಿದು ಯುವಕ ಆತ್ಮಹತ್ಯೆ
ಇದೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಅನೇಕ ಶಾರ್ಟ್ ಫಿಲಂಗಳು ಬಿಡುಗಡೆ ಕಾಣಲಿವೆ.
“ನೆಟ್‌ಫ್ಲಿಕ್ಸ್ 2 ನಿಮಿಷಗಳ 25-30 ಶಾರ್ಟ್‌ಫಿಲಂಗಳನ್ನು ನಿರ್ಮಿಸಲಿದೆ. ಅವುಗಳನ್ನು ದೂರದರ್ಶನ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.