ನವದೆಹಲಿ: ವಿಶ್ವದ ಖ್ಯಾತ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ನೆಟ್‌ಫ್ಲಿಕ್ಸ್, ಭಾರತದಲ್ಲಿ ಇನ್ನು ಮುಂದೆ ಪಾಸ್‌ವರ್ಡ್ ಶೇರಿಂಗ್ ಆಯ್ಕೆಯನ್ನು ನಿರ್ಬಂಧಿಸುವುದಾಗಿ ಹೇಳಿಕೊಂಡಿದೆ.
ಅಲ್ಲದೇ, ಒಂದು ಅಕೌಂಟ್ ಅದರ ಮಾಲಿಕನಿಗೆ ಮಾತ್ರ ಲಭ್ಯವಾಗುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದೆ.
ಅಲ್ಲದೇ, ಸಂಸ್ಥೆಯ ಪ್ರಕಾರ, ಯಾವುದೇ ನೆಟ್‌ಫ್ಲಿಕ್ಸ್ ಬಳಕೆದಾರರು, ನೋಂದಣಿ ಸಂದರ್ಭದಲ್ಲಿ ಕುಟುಂಬದ ಶೇರಿಂಗ್ ಪಾಸ್‌ವರ್ಡ್‌ಗೆ ಯಾವ ಮಾಹಿತಿ ನೀಡಿರುತ್ತಾರೋ ಅದು ಚಾಲ್ತಿಯಲ್ಲಿರುತ್ತದೆ. ಆ ಮಾಹಿತಿಗಳ ಆಧಾರದಲ್ಲಿಯಾದರೆ ಕುಟುಂಬದ ಸದಸ್ಯರಿಗೂ ಕೂಡಾ ಅಕೌಂಟ್ ಬಳಕೆಗೆ ಲಭ್ಯವಾಗುತ್ತದೆ. ಆದರೆ, ನಂತರದಲ್ಲಿ ಸ್ನೇಹಿತರಿಗೆ ಅಥವಾ ಬೇರೆ ಯಾರಿಗೋ ಪಾಸ್‌ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ.
ಶೇರಿಂಗ್ ಆಯ್ಕೆಗೆ ಹೆಚ್ಚುವರಿ ಹಣ!
ನೆಟ್‌ಫ್ಲಿಕ್ಸ್‌ನಲ್ಲಿ ಶೇರಿಂಗ್ ಆಯ್ಕೆ ಇಲ್ಲವೇ ಇಲ್ಲ ಎಂದಲ್ಲ. ಶೇರಿಂಗ್ ಆಯ್ಕೆ ಬೇಕಾದಲ್ಲಿ ಹೆಚ್ಚುವರಿ ಹಣ ಪಾವತಿಸಿ ಶೇರಿಂಗ್ ಆಯ್ಕೆ ಪಡೆದುಕೊಳ್ಳಬೇಕಾಗುತ್ತದೆ ಎಂದಿದೆ. ಪಾಸ್‌ವರ್ಡ್ ಶೇರಿಂಗ್ ಬಳಸಿ ಹಲವಾರು ಮಂದಿ ಒಂದೇ ಖಾತೆಯನ್ನು ಬಳಕೆ ಮಾಡುತ್ತಿರುವುದರಿಂದ ಸಂಸ್ಥೆಗೆ ನಷ್ಟವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ‘ಹಾಸ್ಟೆಲ್ ಹುಡುಗ’ರ ಹಾಜರಿಗೆ ನೋ ಪ್ರಾಬ್ಲೆಮ್: ನಟಿ ರಮ್ಯಾ ಅರ್ಜಿ ವಜಾ ಮಾಡಿದ ಕೋರ್ಟ್