Advertisement

Netflix:ಭಾರತದ ಬಳಕೆದಾರರಿಗೆ ನೆಟ್‌ ಫ್ಲಿಕ್ಸ್‌ ಶಾಕ್:‌ಪಾಸ್‌ ವರ್ಡ್‌ ನಿರ್ಬಂಧ ಪರಿಣಾಮವೇನು

01:51 PM Jul 21, 2023 | Team Udayavani |

ನವದೆಹಲಿ: ಜನಪ್ರಿಯ OTT ಫ್ಲ್ಯಾಟ್‌ ಫಾರಂ ನೆಟ್‌ ಫ್ಲಿಕ್ಸ್‌(NETFLIX) ಇದೀಗ ತನ್ನ ವಹಿವಾಟು ಮತ್ತು ಆದಾಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಬದಲಾವಣೆಗೆ ಮುಂದಾಗಿದ್ದು, ಭಾರತದಲ್ಲಿ ಪಾಸ್‌ ವರ್ಡ್‌ ಶೇರಿಂಗ್‌ ಗೆ ನಿರ್ಬಂಧ ವಿಧಿಸಿದೆ.

Advertisement

ಇದನ್ನೂ ಓದಿ:Brain-Eating Amoeba: ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತ್ಯು

ಭಾರತದಲ್ಲಿ ನೆಟ್‌ ಫ್ಲಿಕ್ಸ್‌ ಬಳಕೆದಾರರು ಪಾಸ್‌ ವರ್ಡ್‌ ಶೇರ್‌ (Password sharing) ಮಾಡುವುದನ್ನು ನಿರ್ಬಂಧಿಸಿರುವುದಾಗಿ ಘೋಷಿಸಿದೆ. ಇದರ ಪರಿಣಾಮ ಇನ್ಮುಂದೆ ಒಬ್ಬರ ಪಾಸ್‌ ವರ್ಡ್‌ ಬಳಸಿಕೊಂಡು ನೆಟ್‌ ಫ್ಲಿಕ್ಸ್‌ ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ನೆಟ್‌ ಫ್ಲಿಕ್ಸ್‌ ನ ಹೊಸ ನಿಯಮದ ಪ್ರಕಾರ, ನೆಟ್‌ ಫ್ಲಿಕ್ಸ್‌ ಬಳಕೆದಾರರ ಪಾಸ್‌ ವರ್ಡ್‌ ಅನ್ನು ಹೆಚ್ಚು ಜನರು (ಫ್ಯಾಮಿಲಿ, ಗೆಳೆಯರು) ಬಳಸಲು ನಿರ್ಬಂಧ ವಿಧಿಸಿದೆ. ಈ ನಿಟ್ಟಿನಲ್ಲಿ ಭಾರತದ ನೆಟ್‌ ಫ್ಲಿಕ್ಸ್‌ ಬಳಕೆದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಚರ್ಚೆ ಹುಟ್ಟುಹಾಕಿದೆ.

ಪಾಸ್‌ ವರ್ಡ್‌ ಶೇರಿಂಗ್‌ ಗೆ ನಿರ್ಬಂಧ:

Advertisement

*ಇನ್ನು ಮುಂದೆ ಭಾರತೀಯ ನೆಟ್‌ ಫ್ಲಿಕ್ಸ್‌ ಬಳಕೆದಾರರು ತಮ್ಮ ಖಾತೆಯನ್ನು ಇತರರೊಂದಿಗೆ ಉಚಿತವಾಗಿ ಹಂಚಿಕೊಳ್ಳಲು ಅನುಮತಿ ನೀಡುವುದಿಲ್ಲ. ಎಲ್ಲಾ ಬಳಕೆದಾರರು ಚಂದಾದಾರರಾಗಬೇಕಾಗುತ್ತದೆ.

*ನೆಟ್‌ ಫ್ಲಿಕ್ಸ್‌ ಖಾತೆದಾರರು ಒಂದೇ ಮನೆಯಲ್ಲಿ ವಾಸವಿದ್ದವರೊಂದಿಗೆ ಮಾತ್ರ ಖಾತೆಯನ್ನು ಹಂಚಿಕೊಳ್ಳಬಹುದಾಗಿದೆ.

*ಒಂದು ವೇಳೆ ನೀವು ನಿಮ್ಮ ಮನೆಯ ಸ್ಥಳದೊಂದಿಗೆ ನೋಂದಾಯಿಸಲಾದ ನೆಟ್‌ ಫ್ಲಿಕ್ಸ್‌ ಖಾತೆಯನ್ನು ಬಳಸುತ್ತಿದ್ದರೆ, ನಿಮ್ಮ ಮೊಬೈಲ್‌ ತಿಂಗಳಿಗೊಮ್ಮೆಯಾದರೂ ಮನೆಯ ಸ್ಥಳದ ಸಂಪರ್ಕವನ್ನು ಹೊಂದಿರಬೇಕಾಗುತ್ತದೆ. ಅಥವಾ ನೀವು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ, ಪ್ರಯಾಣದಲ್ಲಿದ್ದರೆ ಆಗ ಹಣವನ್ನು ಪಾವತಿಸಬೇಕಾಗುತ್ತದೆ.

ಒಂದು ವೇಳೆ ನೀವು ನಿಮ್ಮ ಗೆಳೆಯರ ಖಾತೆಯನ್ನು ಬಳಸುತ್ತಿದ್ದರೆ, ಆ ಸಂದರ್ಭದಲ್ಲಿ ಹೊಸ ಖಾತೆಯನ್ನು ತೆರೆಯಲು ಸೂಚಿಸಲಾಗುತ್ತದೆ.

*ನೆಟ್‌ ಫ್ಲಿಕ್ಸ್‌ ಬಳಕೆದಾರರು ತಮ್ಮ ಪಾಸ್‌ ವರ್ಡ್‌ ಅನ್ನು ಶೇರ್‌ ಮಾಡಿದ್ದರೆ, ಆಗ ಅವರ ಹೋಮ್‌ ಲೊಕೇಶನ್‌ (ಮನೆಯ ಸ್ಥಳ) ಅನ್ನು ಅಪ್‌ ಡೇಟ್‌ ಮಾಡುವ ಸಂದೇಶ ಬರಲಿದೆ. ಇದರಿಂದ ನೆಟ್‌ ಫ್ಲಿಕ್ಸ್‌ ಶೇರಿಂಗ್‌ ಪಾಸ್‌ ವರ್ಡ್‌ ಖಾತೆಯನ್ನು ನಿರ್ಬಂಧಿಸಲಿದೆ.

*ನೆಟ್‌ ಫ್ಲಿಕ್ಸ್‌ ಬಳಕೆದಾರರ IP ವಿಳಾಸ, ಮೊಬೈಲ್‌ ಐಡಿ, ವೈ-ಫೈ ನೆಟ್ವರ್ಕ್‌ ಮತ್ತು ಖಾತೆಯ ಚಟುವಟಿಕೆಯನ್ನು ಪರಿಶೀಲಿಸುವ ಮೂಲಕ Location ಪತ್ತೆ ಹಚ್ಚಲಿದೆ.

*ನೆಟ್‌ ಫ್ಲಿಕ್ಸ್‌ ಅನ್ನು ಮೊಬೈಲ್‌ ನಲ್ಲಿ ಮಾತ್ರ ಬಳಸಲು ತಿಂಗಳಿಗೆ 149 ರೂಪಾಯಿ ಪಾವತಿಸಬೇಕಾಗಿದ್ದು, ವಿವಿಧ ಡಿವೈಸ್‌ ಗಳಲ್ಲಿ ನೆಟ್‌ ಫ್ಲಿಕ್ಸ್‌ ವೀಕ್ಷಿಸಲು ತಿಂಗಳಿಗೆ 199 ರೂಪಾಯಿ ನಿಗದಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next