ನವದೆಹಲಿ: ನೆಟ್‌ಫ್ಲಿಕ್ಸ್ ಗ್ರಾಹಕರಿಗೆ ಸ್ಟ್ಯಾಂಡರ್ಡ್ ದರಗಳಿಗಿಂತ ಕಡಿಮೆ ದರದಲ್ಲಿ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸಲು ತನ್ನ ‘ಬೇಸಿಕ್ ವಿತ್ ಆಡ್ಸ್’ ಯೋಜನೆಯನ್ನು ಹೊರತರುವುದಾಗಿ ಘೋಷಿಸಿದೆ. ಯೋಜನೆಯು ಮೊಬೈಲ್ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು 15 ರಿಂದ 30 ಸೆಕೆಂಡುಗಳ ಜಾಹೀರಾತುಗಳು ವಿಡಿಯೋ ಶೋಗಳ ಮೊದಲು ಅಥವಾ ಆ ಸಮಯದಲ್ಲಿಕಾಣಿಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಸದ್ಯಕ್ಕೆ, ಕಂಪನಿಯು ಕೆಲವು ಆಯ್ದ ದೇಶಗಳಲ್ಲಿ ಮಾತ್ರ ಈ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಇದು ವೀಕ್ಷಕರ ಅಥವಾ ಚಂದಾದಾರರ ಪ್ರತಿಕ್ರಿಯೆ ಮತ್ತು ಕಾರ್ಯಕ್ಷಮತೆಯನ್ನು ಅವಲಂಬಿಸಿ ಇತರ ದೇಶಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಪ್ರಸ್ತುತ ಆಯ್ಕೆಯಾ ಪಟ್ಟಿಯಲ್ಲಿ ಭಾರತ ಒಳಗೊಂಡಿಲ್ಲ.
ನೆಟ್‌ಫ್ಲಿಕ್ಸ್ ನ ಈ ಹೊಸ ಯೋಜನೆಯು ಕಂಪನಿಯ ಅಗ್ಗದ ಯೋಜನೆಗಳಲ್ಲಿ ಒಂದಾದ ‘ಬೇಸಿಕ್ ವಿತ್ ಜಾಹೀರಾತು’ ಮೊಬೈಲ್ ಫೋನ್‌ಗಳಲ್ಲಿ ಜಾಹೀರಾತುಗಳೊಂದಿಗೆ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸುತ್ತದೆ ಮತ್ತು ಇದು ಗ್ರಾಹಕರಿಗೆ ತಿಂಗಳಿಗೆ ಸುಮಾರು 6.99 ಯುಎಸ್ ಡಾಲರ್ ಬೆಲೆಯಲ್ಲಿ ದೊರೆಯಲಿದೆ.
ಇದಲ್ಲದೆ, ಸ್ಟ್ರೀಮಿಂಗ್ ಗುಣಮಟ್ಟವು 720 ಫಿಕ್ಸೆಲ್ ವರೆಗೆ ಸೀಮಿತವಾಗಿದೆ. ಕೆಲವು ಶೋಗಳಿಗೆ ಪರವಾನಗಿ ನಿರ್ಬಂಧಗಳಿಂದಾಗಿ ಯೋಜನೆಯಲ್ಲಿ ಸೀಮಿತ ಸಂಖ್ಯೆಯ ಪ್ರದರ್ಶನಗಳು ಲಭ್ಯವಿರುವುದಿಲ್ಲ ಎಂದು ನೆಟ್‌ಫ್ಲಿಕ್ಸ್ ಹೇಳಿದೆ. ಪ್ರತಿ ಗಂಟೆಗೆ ಸರಾಸರಿ 4 ರಿಂದ 5 ನಿಮಿಷಗಳ ಜಾಹೀರಾತುಗಳು ಈ ಯೋಜನೆಯಡಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಯೋಜನೆ ಲಭ್ಯವಿರುವ ದೇಶಗಳು?
Related Articles
ಕಂಪನಿಯು ನವೆಂಬರ್‌ನಲ್ಲಿ 12 ದೇಶಗಳಲ್ಲಿ ‘ಬೇಸಿಕ್ ವಿತ್ ಆಡ್ಸ್’ ಯೋಜನೆಯನ್ನು ಹೊರತರುವುದಾಗಿ ಘೋಷಿಸಿದೆ. ಅವುಗಳೆಂದರೆ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೋ, ಸ್ಪೇನ್, ಯುಕೆ ಮತ್ತು ಯುಎಸ್ ದೇಶಗಳಾಗಿವೆ.
ಭಾರತದಲ್ಲಿ ಏಕೆ ಲಭ್ಯವಾಗದಿರಲು ಕಾರಣ?
ನವೆಂಬರ್‌ನಲ್ಲಿ ಪ್ರಾರಂಭವಾಗುವ ಆಯ್ದ 12 ದೇಶಗಳ ಪೈಕಿ ಭಾರತ ಒಳಗೊಂಡಿಲ್ಲ. ಆದಾಗ್ಯೂ, ಈ 12 ದೇಶಗಳಿಗೆ ಹೋಲಿಸಿದರೆ ನೆಟ್‌ಫ್ಲಿಕ್ಸ್ ಯೋಜನೆಗಳು ಈಗಾಗಲೆ ಭಾರತದಲ್ಲಿ ಸಾಕಷ್ಟು ಅಗ್ಗವಾಗಿ ದೊರೆಯುತ್ತವೆ.
ಅದು ತಿಂಗಳಿಗೆ 2 ಯುಎಸ್ ಡಾಲರ್ ಗಳಿಗೆ ಇಳಿಯುತ್ತದೆ. ಇದು 480p, 2-ಸ್ಕ್ರೀನ್ ಮತ್ತು ಕೇವಲ ಮೊಬೈಲ್ ಮತ್ತು ಟ್ಯಾಬ್ಲೆಟ್ ವರೆಗೆ ರೆಸಲ್ಯೂಶನ್ ಅನ್ನು ಅನುಮತಿಸುವ ಮೊಬೈಲ್ ಪ್ಲಾನ್ ತಿಂಗಳಿಗೆ ಸುಮಾರು 150 ರೂ. ಇತರ ಯೋಜನೆಗಳು 199 ರೂ., 499 ರೂ.ಮತ್ತು 649 ರೂ. ಗಳಾಗಿವೆ.