ಮುಂಬೈ: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕಿರಿಯ ಸೋದರನ ಪುತ್ರ ಅರ್ಧೇಂದು ಬೋಸ್ ಮುಂಬೈನಲ್ಲಿ ಸೋಮವಾರ (ಆಗಸ್ಟ್ 07) ವಿಧಿವಶರಾಗಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:Tomato Prices Soar… ಟೊಮ್ಯಾಟೋ ರಕ್ಷಣೆಗೆ ತೋಟಕ್ಕೆ ಕ್ಯಾಮೆರಾ ಅಳವಡಿಸಿದ ರೈತ
ಅರ್ಧೇಂದು ಬೋಸ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿರುವುದಾಗಿ ಪತ್ನಿ ಕೆರ್ಮೀನ್ ಬೋಸ್ ತಿಳಿಸಿದ್ದಾರೆ. ದೇಶಕ್ಕಾಗಿ ಹೋರಾಡಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ತಮ್ಮ ಚಿಕ್ಕಪ್ಪ(ಸುಭಾಶ್ಚಂದ್ರ ಬೋಸ್)ನ ತ್ಯಾಗದ ಬಗ್ಗೆ ಅರ್ಧೇಂದು ಬೋಸ್ ಅಪಾರ ಹೆಮ್ಮೆ ಹೊಂದಿದ್ದರು ಎಂದು ಕೆರ್ಮೀನ್ ಬೋಸ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
ಅರ್ಧೇಂದು ಬೋಸ್ ಅವರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕಿರಿಯ ಸಹೋದರ ಶೈಲೇಶ್ ಚಂದ್ರ ಬೋಸ್ ಅವರ ಪುತ್ರ. ಅರ್ಧೇಂದು ಬೋಸ್ ಅವರು ಹಲವಾರು ವರ್ಷಗಳ ಕಾಲ ಬಾಂಬೆ ಡೈಯಿಂಗ್ ರೂಪದರ್ಶಿಯಾಗಿದ್ದರು. ಅಷ್ಟೇ ಅಲ್ಲ ಅರ್ಧೇಂದು ಹಲವಾರು ಸಿನಿಮಾಗಳಲ್ಲಿ ನಟಿಸಿರುವುದಾಗಿ ವರದಿ ತಿಳಿಸಿದೆ.
ನಟ, ರೂಪದರ್ಶಿ ಅರ್ಧೇಂದು ಬೋಸ್ ಅವರು ಪತ್ನಿ ಕೆರ್ಮೀನ್ ಬೋಸ್ ಹಾಗೂ ಪುತ್ರ ನೆಡಾಲ್ ಬೋಸ್ ಅವರನ್ನು ಅಗಲಿದ್ದಾರೆ.