Advertisement

ಉಪನ್ಯಾಸಕ ಹುದ್ದೆಗೆ ನೆಟ್‌ ಕಡ್ಡಾಯ

11:27 PM Apr 09, 2019 | mahesh |

ಕೇಂದ್ರ ಸರಕಾರದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೂ ಸ್ನಾತಕೋತ್ತರ ಪದವೀಧರರು ಸಂಶೋಧನಕಾರರಾಗಲು ಮತ್ತು ಪದವಿಪೂರ್ವ, ಪದವಿ ಕಾಲೇಜುಗಳಿಗೆ ಅಧ್ಯಾಪಕರ ವೃತ್ತಿಗೆ ಅರ್ಹರಾಗಲು ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ನಡೆಸುತ್ತ ದೆ. ವರ್ಷದಲ್ಲಿ ಜೂನ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಎರಡು ಬಾರಿ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹರಾದರೆ ಪಿಎಚ್‌.ಡಿ. ಹಾಗೂ ಕಾಲೇಜುಗಳ ಉಪನ್ಯಾಸಕ ಹುದ್ದೆಗೆ ಬಯಸಿ ಅರ್ಜಿ ಸಲ್ಲಿ ಸಲು ಅರ್ಹ ರು. ಸುಮಾರು 84 ವಿಷಯಗಳ ಮೇಲೆ ಈ ಪರೀಕ್ಷೆ ನಡೆಸಲಾಗುತ್ತದೆ.  ಸಂಶೋಧನಕಾರರು ಹಾಗೂ ಅಧ್ಯಾಪಕರಲ್ಲಿನ ಜ್ಞಾನದ ಗುಣಮಟ್ಟ , ಪಾರದರ್ಶಕತೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೂ ಈ ಪರೀಕ್ಷೆ ನಡೆಸಲಾಗುತ್ತದೆ.

Advertisement

ಪರೀಕ್ಷೆ ವಿಧಾನ
2019 ರ ಯುಜಿಸಿ ನೆಟ್‌ ಪರೀಕ್ಷೆಯಲ್ಲಿ ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಈಗ ಆನ್‌ಲೈನ್‌ ಮುಖಾಂತರ ಮಾತ್ರ ಪರೀಕ್ಷೆ ಬರೆಯಬೇಕು. ಮೊದಲ ಹಂತದ ಪರೀಕ್ಷೆಗೆ ಅರ್ಹರು ಅರ್ಜಿ ಸಲ್ಲಿಸಿದ್ದು, ಈ ಜೂನ್‌ ತಿಂಗಳಲ್ಲಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಎನ್‌ಇಟಿ ಗೆ ಅರ್ಜಿ ಸಲ್ಲಿಸಿದ ಪರೀಕ್ಷಾರ್ಥಿಗಳು ಎರಡು ಪರೀಕ್ಷೆಯನ್ನು ಎದುರಿಸಬೇಕು.ಈಗ ಬದಲಾವಣೆ ಮಾಡಲಾಗಿದೆ. ಪರೀಕ್ಷಾರ್ಥಿಗಳ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದ ಒಂದು ಪತ್ರಿಕೆಯಾದರೆ, ಇನ್ನೊಂದು ಸಾಮಾನ್ಯ ಜ್ಞಾನ, ಅಪ್ಟಿಟ್ಯೂಡ್‌ಗಳ ಕುರಿತಾಗಿದ್ದಾಗಿರುತ್ತದೆ. ಪರೀಕ್ಷೆಯಲ್ಲಿ ಪ್ರಶ್ನೆಗಳು ಬಹುಆಯ್ಕೆ ಆಧಾರಿತವಾಗಿರುತ್ತವೆ. ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ 100 ಅಂಕಕ್ಕೆ ನಿಗದಿಪಡಿಸಲಾಗಿದೆ. 50 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ. ಇನ್ನು ಐಚ್ಛಿಕ ವಿಷಯಕ್ಕೆ ಸಂಬಂಧಿಸಿ ದಂತೆ 200 ಅಂಕಗಳಿಗೆ 100 ಪ್ರಶ್ನೆಗಳಿಗೆ ಉತ್ತರಿಸಬೇಕು.

ಪರೀಕ್ಷೆಗೆ ಯಾರು ಅರ್ಹರು?
ಪರೀಕ್ಷಾರ್ಥಿಗಳು ಯುಜಿಸಿಯಿಂದ ಮಾನ್ಯತೆ ಪಡೆದ ದೇಶದ ಯಾವುದೇ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನದ ಐಚ್ಛಿಕ ವಿಷಯದಲ್ಲಿ ಶೇ. 55 ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು. ಪರಿಶಿಷ್ಟ ಪಂಗಡ/ ಪ.ಜಾತಿ ವರ್ಗಗಳ ವಿದ್ಯಾರ್ಥಿಗಳು ಶೇ. 50 ರಷ್ಟು ಅಂಕ ಗಳಿಸಿರಬೇಕು. ಎನ್‌ಇಟಿ ಪರೀಕ್ಷೆಗೆ ಯಾವುದೇ ವಯೋಮಿತಿಯ ನಿರ್ಬಂಧ ಇರುವುದಿಲ್ಲ ಆದರೆ, ಜೆಆರ್‌ಎಫ್ ವಿದ್ಯಾರ್ಥಿ ವೇತನಕ್ಕೆ ಬಯಸುವವರಿಗೆ ಮಾತ್ರ 30ವರ್ಷದೊಳಗೆ ಎನ್‌ಇಟಿ ಉತ್ತೀರ್ಣರಾದವರೂ ಅರ್ಹ

ಅರ್ಜಿ ಸಲ್ಲಿಸುವುದು ಹೇಗೆ?
ಯುಜಿಸಿ ಎನ್‌ಇಟಿ ಪರೀಕ್ಷೆಗೆ ಆನ್‌ಲೈನ್‌ ಮುಖಾಂತರ ಮಾತ್ರ ನಿಗದಿಪಡಿಸಿದ ಸಮಯದ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯಲ್ಲಿ ವಿದ್ಯಾರ್ಥಿಯೂ ತನ್ನ ಪೂರ್ಣ ವಿಳಾಸವೂ ಭರ್ತಿ ಮಾಡಿ, ತಾನು ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿ, ಪರೀಕ್ಷೆ ಬರೆಯುವ ಐಚ್ಛಿಕ ವಿಷಯ ಹಾಗೂ ಕೋಡ್‌ನ್ನು ನಮೋದಿಸಬೇಕು. ಅಲ್ಲದೇ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಎಲ್ಲ ಅಂಕಪಟ್ಟಿಯನ್ನು ಲಗತ್ತಿ ಸಬೇಕು. ವಿದ್ಯಾರ್ಥಿಯೂ ತಮ್ಮ ಇಮೇಲ್‌ ವಿಳಾಸ, ಫೋನ್‌ ನಂಬ್ರ ಸಹಿತ ಸ್ಕ್ಯಾನ್‌ ಫೋಟೋ ಮೂಲಕ ಅರ್ಜಿಯನ್ನು www.ntanet.nic.in
ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಚಲನ್‌ನ್ನು ಹಣವನ್ನು ಬ್ಯಾಂಕ್‌ಗಳಿಗೆ ತುಂಬ ಬೇಕಾ ಗುತ್ತದೆ. ಅರ್ಜಿಯನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರವನ್ನು ನೀಡಲಾಗುತ್ತದೆ.

ಶಿವ ಸ್ಥಾವರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next