Advertisement
ಧಾರ್ಮಿಕ ಕಾರ್ಯಕ್ರಮವಾಗಿ ಸೆ. 21 ರಂದು ಮುಂಜಾನೆ 6 ರಿಂದ ನೈರ್ಮಲ್ಯ ದರ್ಶನ, ಕ್ಷೀರಾಭಿಷೇಕ, ಮಹಾಮಂಗಳಾರತಿ, ಪೂರ್ವಾಹ್ನ 9ರಿಂದ ಪ್ರಾರ್ಥನೆ, ತೋರಣ ಮುಹೂರ್ತ, ಮಹಾ ಸಂಕಲ್ಪ, ಸಂಜೆ 5.30ರಿಂದ ದುರ್ಗಾ ಸಪ್ತಶತೀ ಪಾರಾಯಣ, ಲಲಿತ ಸಹಸ್ರನಾಮ ಪಾರಾಯಣ, ಸಹಸ್ರ ಕಲಾವೃಂದ ಸೀವುಡ್ ಇವರಿಂದ ಭಜನೆ, ಮಹಾ ಮಂಗಳಾರತಿ ಅನ್ನಪ್ರಸಾದ ನಡೆಯಲಿದೆ.
Related Articles
Advertisement
ಸೆ. 26ರಂದು ಬೆಳಗ್ಗೆ 6ರಿಂದ ನೈರ್ಮಲ್ಯ ದರ್ಶನ, ಕ್ಷೀರಾಭಿಷೇಕ, ಮಂಗಳಾರತಿ, ಬೆಳಗ್ಗೆ 8.30ರಿಂದ ಪ್ರಾರ್ಥನೆ, ಸಂಕಲ್ಪ, ಪುಣ್ಯಾಹ ವಾಚನ, ಬೆಳಗ್ಗೆ 9ರಿಂದ ಚಂಡಿಕಾ ಹೋಮ, ಪೂರ್ಣಾಹುತಿ, ಪೂರ್ವಾಹ್ನ 11.45ಕ್ಕೆ ಸುಹಾಸಿನಿ ಪೂಜೆ, ಕನ್ನಿಕಾ ಪೂಜೆ, ಮಧ್ಯಾಹ್ನ 12ರಿಂದ ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಪ್ರಸಾದ ನೆರವೇರಲಿದೆ. ಸಂಜೆ 5ರಿಂದ ಹರಿದ್ರಾ ಅಲಂಕಾರ, ದುರ್ಗಾ ಸಪ್ತಶತೀ ಪಾರಾಯಣ, ಸಂಜೆ 6.30ರಿಂದ ಲಲಿತ ಸಹಸ್ರನಾಮ ಪಾರಾಯಣ, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿಯವರಿಂದ ಭಜನೆ, ಮಹಾ ಮಂಗಳಾರತಿ ತದನಂತರ ಅನ್ನಪ್ರಸಾದವನ್ನು ಆಯೋಜಿಸಲಾಗಿದೆ.
ಸೆ. 27 ರಂದು ಬೆಳಗ್ಗೆ 6ರಿಂದ ನೈರ್ಮಲ್ಯ ದರ್ಶನ, ಕ್ಷೀರಾಭಿಷೇಕ, ಮಂಗಳಾರತಿ, ಸಂಜೆ 5.30 ರಿಂದ ದುರ್ಗಾ ಸಪ್ತಶತೀ ಪಾರಾಯಣ, 6.30ರಿಂದ ಲಲಿತ ಸಹಸ್ರನಾಮ ಪಾರಾಯಣ, ಸಂಜೆ 7ರಿಂದ ಖಾಂದೇಶ್ವರ ಭಜನಾ ಮಂಡಳಿ ಖಾಂದ ಕಾಲನಿಯವರಿಂದ ಭಜನೆ, 8.30 ಮಹಾ ಮಂಗಳಾರತಿ ತದನಂತರ ಅನ್ನಪ್ರಸಾದ ಜರಗಲಿವೆೆ.
ಸೆ. 28ರಂದು ಬೆಳಗ್ಗೆ 6ರಿಂದ ನೈರ್ಮಲ್ಯ ದರ್ಶನ, 6.30ರಿಂದ ಕ್ಷೀರಾಭಿಷೇಕ, ಮಂಗಳಾರತಿ, ಸಂಜೆ 5.30ರಿಂದ ದುರ್ಗಾ ಸಪ್ತಶತೀ ಪಾರಾಯಣ, 6.30ರಿಂದ ಲಲಿತ ಸಹಸ್ರನಾಮ ಪಾರಾಯಣ, ಸಂಜೆ 7ರಿಂದ ಹರಿ ಕೃಷ್ಣ ಭಜನಾ ಮಂಡಳಿ ಆಶ್ರಯದವರಿಂದ ಭಜನೆ, ಮಹಾ ಮಂಗಳಾರತಿ ತದನಂತರ ಅನ್ನಪ್ರಸಾದವನ್ನು ಆಯೋಜಿಸಲಾಗಿದೆ.
ಸೆ. 29ರಂದು ಬೆಳಗ್ಗೆ 6ರಿಂದ ನೈರ್ಮಲ್ಯ ದರ್ಶನ, ಕ್ಷೀರಾಭಿಷೇಕ, ಮಂಗಳಾರತಿ, ಪೂರ್ವಾಹ್ನ 9.30ರಿಂದ ಪ್ರಾರ್ಥನೆ, ಸಂಕಲ್ಪ, ಪುಣ್ಯಾಹ ವಾಚನ, ಪೂರ್ವಾಹ್ನ 10 ರಿಂದ ದುರ್ಗಾ ಹೋಮ, ಪೂರ್ವಾಹ್ನ 11.30 ಪೂರ್ಣಾಹುತಿ, 11.45ಕ್ಕೆ ಮಂಗಳಾರತಿ, ಮಧ್ಯಾಹ್ನ 12.00ಕ್ಕೆ ಪ್ರಸಾದ ವಿತರಣೆ, ಸಂಜೆ 5.30ರಿಂದ ದುರ್ಗಾ ಸಪ್ತಶತೀ ಪಾರಾಯಣ, 6.30 ರಿಂದ ಲಲಿತ ಸಹಸ್ರನಾಮ ಪಾರಾಯಣ, 7 ರಿಂದ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿಯವರಿಂದ ಭಜನೆ, ಮಹಾ ಮಂಗಳಾರತಿ, ದಾಂಡಿಯಾ ನೃತ್ಯ ತದನಂತರ ಅನ್ನಪ್ರಸಾದ ಜರಗಲಿದೆ.
ಸೆ. 30 ರಂದು ಬೆಳಗ್ಗೆ 9 ರಿಂದ ಶಾರದಾ ಪೂಜೆ, ಪೂರ್ವಾಹ್ನ 10 ರಿಂದ ಅಕ್ಷರಾಭ್ಯಾಸ, ಪೂರ್ವಾಹ್ನ 11 ರಿಂದ ಆಯುಧ ಪೂಜೆ, ಅನ್ನದಾನ ನಡೆಯಲಿದೆ. ವಿಶೇಷ ಪೂಜೆಗಳನ್ನು ನೀಡಲಿಚ್ಚಿಸುವ ಭಕ್ತಾದಿಗಳು ಮಂದಿರದ ಸಂಬಂಧಪಟ್ಟವರನ್ನು (9820313827, 9833284044, 9004256777) ಸಂಪರ್ಕಿಸ ಬಹುದು. ಹತ್ತು ದಿನ ನಡೆಯುವ ಈ ಎಲ್ಲಾ ಕಾರ್ಯಕ್ರಮದಲ್ಲೂ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಂದಿರದ ಪ್ರಕಟನೆ ತಿಳಿಸಿದೆ.