ನವಿಮುಂಬಯಿ, ಅ. 6: ನೆರೂಲ್ ಪ್ಲಾಟ್ ನಂಬರ್ 16, ಸೆಕ್ಟರ್ 29 ಸ್ಟೇಷನ್ ರೋಡ್‌ನಲ್ಲಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದೆ.
ನವರಾತ್ರಿ ಉತ್ಸವದ ನಿಮಿತ್ತ ಅ. 4ರಂದು ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ತಂತ್ರಿ ರಾಮಚಂದ್ರ ಬಾಯರಿ ಅವರ ಮಾರ್ಗದರ್ಶನ ಮತ್ತು ಪ್ರಧಾನ ಅರ್ಚಕ ಕೃಷ್ಣ ಭಟ್ ಅವರ ಮುಂದಾಳತ್ವದಲ್ಲಿ ಪ್ರಾರ್ಥನೆ, ಪುಣ್ಯಾಹವಾಚನ, ಸಂಕಲ್ಪ ಚಂಡಿಕಾ ಹೋಮ, ಬಳಿಕ ಪೂರ್ಣಾಹುತಿ, ಸುವಾಸಿನಿ ಪೂಜೆ, 12 ಗಂಟೆಗೆ ಮಂಗಳಾರತಿ ಜರಗಿತು. ಆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ಮಂದಿರದ ಭಜನ ಮಂಡಳಿಯವರಿಂದ ಭಜನೆ, ರಾತ್ರಿ 8ರಿಂದ ಮಹಾಮಂಗಳಾರತಿ, ದಾಂಡಿಯಾ ಗರ್ಬಾ ನೃತ್ಯ ನಡೆಯಿತು. ಚಂಡಿಕಾ ಹೋಮದಲ್ಲಿ ಹಾಗೂ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು, ಪರಿಸರದ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಶ್ರೀ ಕ್ಷೇತ್ರದ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಕಾರ್ಯದರ್ಶಿ ಹರೀಶ್ ಎಲ್. ಶೆಟ್ಟಿ ಜತೆ ಕಾರ್ಯದರ್ಶಿ ಮೋಹನ್‌ದಾಸ್ ಕೆ. ರೈ, ಕೋಶಾಧಿಕಾರಿ ಭಾಸ್ಕರ್ ವೈ. ಶೆಟ್ಟಿ, ಜೊತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್ ಮಾಡ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಎಸ್. ಶೆಟ್ಟಿ, ವಿಶ್ವಸ್ಥರು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಅರ್ಚಕ ವೃಂದ ಹಾಗೂ ಸರ್ವ ಸದಸ್ಯರು, ನೆರೂಲ್
ಮಣಿಕಂಠ ಸೇವಾ ಸಂಘ ಮತ್ತು ಧರ್ಮಶಾಸ್ತ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು. ಶ್ರೀ ಕ್ಷೇತ್ರದಲ್ಲಿ ಅ. 8ರ ವರೆಗೆ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಚಿತ್ರ-ವರದಿ: ಸುಭಾಷ್ ಶಿರಿಯಾ