Advertisement
ಡಿ. 24ರಂದು ನೆರೂಲ್ ಶ್ರೀ ಶನೀಶ್ವರ ಮಂದಿರದ ಸಭಾಗೃಹದಲ್ಲಿ ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ನೆರೂಲ್ ಇದರ ರಜತ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಇವರು, ಶ್ರೀ ಅಯ್ಯಪ್ಪ ಭಕ್ತ ಚಾರಿಟೆಬಲ್ ಟ್ರಸ್ಟ್ ಕಳೆದ 25 ವರ್ಷಗಳಿಂದ ಸಾವಿರಾರು ವ್ರತಧಾರಿಗಳನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವಂತೆ ಮಾಡುತ್ತಿರುವುದು ಅಭಿನಂದನೀಯ. ಸಮಿತಿಯ ಕೇವಲ ಧಾರ್ಮಿಕ ಕ್ಷೇತ್ರವಲ್ಲದೆ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಗಮನೀಯ ಸಾಧನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ನುಡಿದರು.
Related Articles
Advertisement
ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಭಕ್ತವೃಂದ ಘನ್ಸೋಲಿ ಇದರ ಅಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು ಇವರು ಮಾತನಾಡಿ, ಗುರುಸ್ವಾಮಿಗಳಾದ ವಿ. ಕೆ. ಸುವರ್ಣ ಮತ್ತು ಅನಿಲ್ ಕುಮಾರ್ ಅವರಂತಹ ಶಿಸ್ತುಬದ್ಧ ಗುರುಸ್ವಾಮಿಗಳಿರುವ ಈ ಸಮಿತಿಯಿಂದ ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿರಲಿ ಎಂದರು.
ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಇವರು ಮಾತನಾಡಿ, ಅಯ್ಯಪ್ಪ ವ್ರತಧಾರಿಗಳನ್ನು ಒಟ್ಟು ಸೇರಿಸಿ, ಆ ಮೂಲಕ ಇಂತಹ ಟ್ರಸ್ಟ್‌ಗಳನ್ನು ಸ್ಥಾಪಿಸಿ, ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯಕ್ಕೆ ದೇವರ ಅನುಗ್ರಹ ಸದಾಯಿರುತ್ತದೆ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಗುರುಸ್ವಾಮಿಗಳಾದ ವಿ. ಕೆ. ಸುವರ್ಣ ಮತ್ತು ಅನಿಲ್ ಕುಮಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹದಿನೆಂಟು ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ರಾಜು ಕೋಟೆಕಾರ್ ಸ್ವಾಮಿ, ಸುಜಿತ್ ಸ್ವಾಮಿ, ಪ್ರಸಾದ್ ಸ್ವಾಮಿ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳಾದ ಶ್ರಾವ್ಯಾ ಶೆಟ್ಟಿ ಮತ್ತು ಜಾಹ್ನವಿ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಮಣಿಕಂಠ ಸೇವಾ ಸಂಘ ನೆರೂಲ್ ಉಪಾಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಸ್ಥಳೀಯ ನಗರ ಸೇವಕಿ ಮೀರಾ ಸಂಜಯ್ ಪಾಟೀಲ್, ಶ್ರೀ ಧರ್ಮಶಾಸ್ತ ಭಕ್ತವೃಂದ ನೆರೂಲ್ ಇದರ ಹರೀಶ್ ಗುರುಸ್ವಾಮಿ ಮೊದಲಾದವರು ಶುಭಹಾರೈಸಿದರು. ನವಿಮುಂಬಯಿ ಮೇಯರ್ ಜಯವಂತ್ ಸುತಾರ್ ಅವರು ಆಗಮಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಸಮಿತಿಯ ಸದಸ್ಯರುಗಳಾದ ಉಪಾಧ್ಯಕ್ಷ ಪ್ರಭಾಕರ ಎಸ್. ಹೆಗ್ಡೆ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ, ಉಪಕಾರ್ಯಾಧ್ಯಕ್ಷೆ ಸುಪ್ರಿತಾ ಅನಿಲ್ ಹೆಗ್ಡೆ, ಸಮಿತಿಯ ಸದಸ್ಯ ಕೃಷ್ಣ ಎಂ. ಪೂಜಾರಿ, ಎನ್. ಕೆ. ಪೂಜಾರಿ, ಗಿರೀಶ್ ಸಿ. ಶೆಟ್ಟಿ, ವಿಜಯ್ ಶೆಟ್ಟಿ, ವಿನೋದಾ ರಾವ್, ಲಕ್ಷ್ಮೀನಾರಾಯಣ ಬಂಗೇರ ಮತ್ತು ಅಯ್ಯಪ್ಪ ವ್ರತಧಾರಿಗಳು ಉಪಸ್ಥಿತರಿದ್ದರು. ಟ್ರಸ್ಟಿ ಕರುಣಾಕರ ಎಸ್. ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಭಾಕರ ಎಸ್. ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.