Advertisement
ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದ ಒಂದು ವಾರದೊಳಗೆ ಮಾತಿನ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆದರೆ ಆಟದ ಮೂಲಕ ತಮ್ಮನ್ನು ತಾವು ಸಾಬೀತು ಪಡಿಸಲು ವಿಫಲರಾಗಿದ್ದಾರೆ.
Related Articles
Advertisement
ಮೋಕ್ಷಿತಾ, ಹನುಮಂತು, ,ಸುರೇಶ್, ಶೋಭಾ, ಶಿಶಿರ್, ಐಶ್ವರ್ಯಾ ಅವರು ರಜತ್ ಅವರಿಗೆ ಈ ವಾರದ ಕಳಪೆ ನೀಡುತ್ತೇವೆ ಎಂದಿದ್ದಾರೆ.
ಒಂದಷ್ಟು ಪದಗಳನ್ನು ಬಳಸಿದ್ದಾರೆ. ಅದು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲವೆಂದು ಸ್ಪರ್ಧಿಗಳು ಹೇಳಿದ್ದಾರೆ.
ನೀವು ಮಾತನಾಡೋದೆ ಹಾಗೆ ಅಂಥ ಹೇಳಿದ್ದೀರಾ ಆದರೆ ಈ ಮನೆಗೆ ಅದು ಸೂಕ್ತವಾಗಲ್ಲವೆಂದು ಶಿಶಿರ್ ಕಾರಣವನ್ನು ನೀಡಿದ್ದಾರೆ.
ಸೆಡೆ ನನ್ಮಗ ಅಂದ್ರೆ ಯಾರು. ವೈಯಕ್ತಿಕವಾಗಿ ಬಂದ ಮಾತನ್ನು ತೆಗೆದುಕೊಳ್ಳಲು ಆಗಿಲ್ಲವೆಂದು ಸುರೇಶ್ ಹೇಳಿದ್ದಾರೆ.
ಎಲ್ಲರ ಕಾರಣವನ್ನು ಕೇಳಿ ರಜತ್ ಗರಂ ಆಗಿದ್ದಾರೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದ್ದಷ್ಟು ಸುಲಭವಲ್ಲ ಬಿಗ್ ಬಾಸ್ ಗೆಲ್ಲೋದು. ಸೆಡೆಗಳನ್ನು ಕಳ್ಸಿಯೇ ನಾನು ಮನೆಗೆ ಹೋಗುವುದು. ಹುಟ್ಟಿದಾಗಿನಿಂದ ಹೀಗೆಯೇ ಇರೋದು. ಮುಂದೆಯೂ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತನಾಡುತ್ತೇನೆ. ಇನ್ಮುಂದೆ ಆಟ ಶುರುವೆಂದಿದ್ದಾರೆ.