Advertisement

ನೆರೂಲ್‌ ಗಣಪತಿ ಅಯ್ಯಪ್ಪ  ದುರ್ಗಾದೇವಿ ಮಂದಿರ: ವಾರ್ಷಿಕ ಉತ್ಸವ

11:36 AM Dec 30, 2018 | |

ನವಿ ಮುಂಬಯಿ: ನೆರೂಲ್‌ ಶ್ರೀ ಮಣಿಕಂಠ ಸೇವಾ ಸಂಘಮ್‌ ಆಡಳಿತ್ವದ ನೆರೂಲ್‌ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ದ್ವಿತೀಯ ವಾರ್ಷಿಕ ಉತ್ಸವ, 29ನೇ ವಾರ್ಷಿಕ ಅಯ್ಯಪ್ಪ ಮಂಡಲ ಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆಯು ಡಿ. 28 ರಂದು ಮೊದಲ್ಗೊಂಡು ಡಿ. 30 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ವಿಜೃಂಭಣೆಯಿಂದ ನಡೆಯಲಿದೆ.
ಡಿ. 29ರಂದು ಬೆಳಗ್ಗೆ 5 ರಿಂದ ಉಷ ಕಾಲಪೂಜೆ, ಪಂಚಗವ್ಯ-ಪಂಚಾಮೃತಾಭಿಷೇಕ, ಅಯ್ಯಪ್ಪ ದೇವರ 49 ಕಲಾಶಾಧಿವಾಸ, ದುರ್ಗಾ-ಗಣಪತಿ ದೇವರ ಪಂಚವಿಂಶತಿ ಕಲಾಶಾಧಿವಾಸ, ಪ್ರಧಾನ ಹೋಮ, ಬ್ರಹ್ಮ ಕುಂಭಾಭಿಷೇಕ, ನ್ಯಾಸ ಪೂಜೆ, ಲಕ್ಷ ಸುಗಂಧ ಪುಷ್ಪಾರ್ಚನೆ, ಮಹಾ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ,  ಮಹಾ ಅನ್ನ ಸಂತರ್ಪಣೆ ನಡೆಯಿತು.

Advertisement

ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತ¤ರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.  ಅಪರಾಹ್ನ  2 ರಿಂದ  ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್‌,   ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಘನ್ಸೋಲಿ, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನ ಮಂಡಳಿ ಇವರಿಂದ ಭಜನೆ ನಡೆಯಿತು.  ಸಂಜೆ 5.30 ರಿಂದ ಆರಾಧನಾ ಪೂಜೆ, ರಾತ್ರಿ ಪೂಜೆ, ಮಹಾ ರಂಗಪೂಜೆ, ಶ್ರೀಭೂತ ಬಲಿ, ಅಷ್ಟವಿಧಾನ ಸೇವೆ, ಓಕುಳಿ, ಕಟ್ಟೆ ಪೂಜೆ, ಜಳಕದ ಬಲಿ, ಶಯನೋತ್ಸವ, ಕವಾಟ ಬಂಧನ, ರಾತ್ರಿ 9.30 ರಿಂದ ಅನ್ನಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.
ಮಂದಿರದ ಅಧ್ಯಕ್ಷ  ಸಂಜೀವ ಎನ್‌. ಶೆಟ್ಟಿ, ಉಪಾಧ್ಯಕ್ಷ ಸುರೇಶ್‌ ಜಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹರಿ ಎಲ…. ಶೆಟ್ಟಿ, ಜತೆ ಕಾರ್ಯದರ್ಶಿ ಮೋಹನದಾಸ್‌ ಕೆ. ರೈ, ಗೌರವ ಕೋಶಾಧಿಕಾರಿ ಖಾಂದೇಶ್‌ ಭಾಸ್ಕರ್‌ ವೈ. ಶೆಟ್ಟಿ, ಜತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್‌ ಮಾಡ, ಗುರು ಸ್ವಾಮಿ ಹರೀಶ್‌ ಎನ್‌. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾ ಎಸ್‌. ಶೆಟ್ಟಿ,ಯುವ ವಿಭಾಗದ ಅಧ್ಯಕ್ಷ ಅರುಣ್‌ ಆರ್‌. ಶೆಟ್ಟಿ ಹಾಗೂ ಮಂದಿರದ ವಿಶ್ವಸ್ಥರು, ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸರ್ವ ಸದಸ್ಯರು ಹಾಗೂ ಎÇÉಾ  ಮಾಲಾಧಾರಿ ಸ್ವಾಮಿಗಳ ಉಪಸ್ಥಿತಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತರು, ಸ್ಥಳೀಯ ತುಳು-ಕನ್ನಡಪರ ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ದಾನಿಗಳು, ಹೊಟೇಲ್‌ ಉದ್ಯಮಿಗಳು, ಸಮಾಜ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಧಾರ್ಮಿಕ ಕಾರ್ಯಕ್ರಮವಾಗಿ  ಡಿ.  28 ರಂದು ಶುಕ್ರವಾರ ಬೆಳಗ್ಗೆ 9 ರಿಂದ ಫಲಾನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹವಾಚನ, ತೋರಣ ಸ್ಥಾಪನ, ಉಗ್ರಾಣ ಮುಹೂರ್ತ, ಶ್ರೀ ಸೂಕ್ತ ಹೋಮ, ಸಂಜೆ 5.30 ರಿಂದ ಭೂಶುದ್ಧಿ, ಪ್ರಸಾದಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ದಿಕಾ³ಲಕ ಬಲಿ, ವಾಸ್ತುರಕ್ಷೆ, ರಾತ್ರಿಪೂಜೆ ನಡೆದು ರಾತ್ರಿ 9 ರಿಂದ ಮಹಾಪೂಜೆ ನಡೆಯಿತು.  

ಡಿ. 30ರಂದು ಬೆಳಗ್ಗೆ 7ರಿಂದ ಕವಾಟೋದ್ಘಾಟನೆ, ವಿಶೇಷ ಅಭಿಷೇಕಗಳು, ಪ್ರಾತಃಕಾಲ ಪೂಜೆ, ಪ್ರಧಾನ ಹೋಮ, ಸಂಪ್ರೋಕ್ಷಣ ಕಲಶಾಭಿಷೇಕ, ತುಲಾಭಾರ ಸೇವೆಗಳು, ಮಧ್ಯಾಹ್ನ ಮಹಾ ಪೂಜೆ, ಮಹಾ ಮಂತ್ರಾಕ್ಷತೆ, ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ,  2.30ರಿಂದ ಮಹಿಳಾ ಬಳಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಲಿದೆ.  3.30  ಮೀನಾಕ್ಷಿ ನೃತ್ಯ ವಿದ್ಯಾಲಯದ ಗುರು ಕೆ.ವಿ.ರಾಜನ್‌ರವರ ಶಿಷ್ಯರು ಹಾಗು ಸ್ಥಳೀಯ ಮಕ್ಕಳಿಂದ ಭರತ ನಾಟ್ಯ, ಅಪರಾಹ್ನ 4.30 ರಿಂದ  ಧಾರ್ಮಿಕ ಸಭೆಯು ಸಂಸ್ಥೆಯ ಅಧ್ಯಕ್ಷರಾದ  ಸಂಜೀವ ಎನ್‌. ಶೆಟ್ಟಿ  ನೇತೃತ್ವದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಹಾಗು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿರುವ ಹಾಗು ಕ್ಷೇತ್ರದ ಮಹಾ ದಾನಿಗಳನ್ನು ಸಮ್ಮಾನಿಸಲಾಗುವುದು. ಸಂಜೆ 6.30ರಿಂದ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯವರರಿಂದ ಕದಂಬ ಕೌಶಿಕೆ  ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಆನಂತರ ಲಕ್ಕಿ ಡ್ರಾ ನಡೆದು ಬಳಿಕ ಅನ್ನಪ್ರಸಾದ ವಿತರಣೆ ಜರಗಲಿದೆ.

ಚಿತ್ರ-ವರದಿ:ಸುಭಾಷ್‌ ಶಿರಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next