ದುಬೈ: ಬಹುಕಾಲದ ಕಾತರಕ್ಕೆ ತೆರೆಬೀಳುವ ಸಮಯ ಬಂದಿದೆ. ವರ್ಣರಂಜಿತ ಕ್ರಿಕೆಟ್ ಕೂಟ ಐಪಿಎಲ್ ಇಂದಿನಿಂದ ಯುಎಇ ನಲ್ಲಿ ಆರಂಭವಾಗಲಿದೆ. ಆದರೆ ಒಂದು ವಿಚಾರ ಮಾತ್ರ ಕ್ರೀಡಾ ಪ್ರೇಮಿಗಳಿಗೆ ನಿರಾಸೆ ತಂದಿದೆ. ಅದುವೇ ಈ ಬಾರಿಯ ಕೂಟದಲ್ಲಿ ಪ್ರಸಿದ್ದ ನಿರೂಪಕಿ ಮಯಾಂತಿ ಲ್ಯಾಂಗರ್ ಭಾಗವಹಿಸುವುದಿಲ್ಲ ಎಂಬ ಸುದ್ದಿ.
ಮಗುವಿಗೆ ಜನ್ಮ ನೀಡಿದ ಕಾರಣದಿಂದ ಮಯಾಂತಿ ಲ್ಯಾಂಗರ್ ಈ ಬಾರಿಯ ಐಪಿಎಲ್ ನಿರೂಪಣೆ ನಡೆಸಿಕೊಡುವುದಿಲ್ಲ. ಮಯಾಂತಿ ಬದಲಿಗೆ ಸ್ಟಾರ್ ಸ್ಪೋರ್ಟ್ಸ್ ಹೊಸ ನಿರೂಪಕಿಯನ್ನು ಆರಿಸಿಕೊಂಡಿದೆ. ಅದೂ ಆಸೀಸ್ ಮೂಲದ ನಿರೂಪಕಿಯನ್ನು.
ಹೌದು, ಮಯಾಂತಿ ಜಾಗವನ್ನು ಆಸ್ಟ್ರೇಲಿಯಾದ ಪ್ರಸಿದ್ದ ಕ್ರೀಡಾ ಪತ್ರಕರ್ತೆ, ನಿರೂಪಕಿ ನೆರೋಲಿ ಮೆಡೋಸ್ ತುಂಬಲಿದ್ದಾರೆ.
ಇದನ್ನೂ ಓದಿ: ಧೋನಿಗೆ ಚಿನ್ನದ ಕ್ಯಾಪ್, ಜಡೇಜಾಗೆ ಚಿನ್ನದ ಖಡ್ಗ!
34ರ ಹರೆಯದ ನೆರೊಲಿ ಈ ಹಿಂದೆ ಫಾಕ್ಸ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಈ ಹಿಂದೆ ಬಿಗ್ ಬ್ಯಾಶ್ ಲೀಗ್, 2018-19ರ ಭಾರತ- ಆಸ್ಟ್ರೇಲಿಯಾ ಸರಣಿ, 2018ರ ಮಗೆಲನ್ ಆಶಸ್ ಸರಣಿಗಳಲ್ಲಿ ನಿರೂಪಕಿಯಾಗಿ ಯಶಸ್ವಿಯಾಗಿದ್ದರು.
ನೆರೋಲಿ ಮೆಡೋಸ್ ಕೇವಲ ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆಗಳ ನಿರೂಪಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್, 2020 ಬ್ರಿಸ್ಬೇನ್ ಇಂಟರ್ ನ್ಯಾಶನಲ್, ಬಾಸ್ಕೆಟ್ ಬಾಲ್ ಕೂಟಗಳಲ್ಲೂ ನಿರೂಪಣೆ ಮಾಡಿದ್ದಾರೆ. ಸದ್ಯ ಕ್ರಿಕೆಟ್ ಲೋಕದ ದುಬಾರಿ ಲೀಗ್ ಐಪಿಎಲ್ ಗೆ ಕಾಲಿಡುತ್ತಿದ್ದು, ಲೀಗ್ ಜೋಶ್ ಗೆ ಮತ್ತಷ್ಟು ಕಿಚ್ಚು ಹಚ್ಚಿದೆ.
ಇದನ್ನೂ ಓದಿ: ಓವರ್ ಟು ಯುಎಇ IPL ಶೋ ಆರಂಭ