Advertisement

ನೇಪಾಲ ಸ್ಪೀಕರ್‌ ವಿರುದ್ಧ ಅತ್ಯಾಚಾರ ಆರೋಪ

07:36 PM Oct 01, 2019 | Team Udayavani |

ಕಾಠ್ಮಂಡು: ನೇಪಾಲ ಸಂಸತ್‌ನ ಕೆಳಮನೆಯ ಸ್ಪೀಕರ್‌ ಕೃಷ್ಣ ಬಹಾದುರ್‌ ಮಹಾರಾ ವಿರುದ್ಧ ಲೈಂಗಿಕ ಕಿರುಕುಳ ನೀಡುವ ಆರೋಪ ಕೇಳಿಬಂದಿದೆ. ಸಂಸತ್‌ನ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಜತೆಗೆ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅಧಿಕೃತವಾಗಿ ದೂರು ದಾಖಲಾಗಿಲ್ಲ. ಕಾಠ್ಮಂಡುವಿನ ಟಿಂಕುನೆ ಎಂಬಲ್ಲಿರುವ ವಸತಿ ಸಮುತ್ಛಯದಲ್ಲಿ ರವಿವಾರ ಮಹಾರಾ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಸಂದರ್ಭದಲ್ಲಿ ಪತಿ ಮನೆಯಲ್ಲಿ ಇರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.

Advertisement

ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್‌ ಕಾರ್ಯಾಲಯ ಇದೆಲ್ಲ ಸುಳ್ಳು ಆರೋಪಗಳು ಎಂದು ಹೇಳಿಕೆ ನೀಡಿದೆ. ಇದೆಲ್ಲ ಭ್ರಮೆಯಿಂದ ಕೂಡಿದ ಆರೋಪಗಳಾಗಿವೆ ಮಹಾರಾ ಅವರ ಮಾಧ್ಯಮ ಕಾರ್ಯದರ್ಶಿ ದಿಲ್ಲಿ ಮಲ್ಲಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next