ಕಠ್ಮಂಡು: ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಅನ್ನು ನೇಪಾಳದ ಲುಕ್ಪಾ ಶೆರ್ಪಾ ಗುರುವಾರ 10ನೇ ಬಾರಿಗೆ ಹತ್ತಿ ದಾಖಲೆ ನಿರ್ಮಿಸಿದ್ದಾರೆ.
ಈ ಮೂಲಕ ಎವರೆಸ್ಟ್‌ನ್ನು ಅತಿ ಹೆಚ್ಚು ಬಾರಿ ಹತ್ತಿದ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
48 ವರ್ಷದ ಲುಕ್ಪಾ 2018ರಲ್ಲಿ 9ನೇ ಬಾರಿ ಎವರೆಸ್ಟ್ ಹತ್ತಿ ಇದೇ ದಾಖಲೆ ಬರೆದಿದ್ದರು. ಇದೀಗ ಅವರ ದಾಖಲೆಯನ್ನು ಅವರೇ ಮುರಿದಿದ್ದಾರೆ.
ಇದನ್ನೂ ಓದಿ:ಆ್ಯಸಿಡ್ ದಾಳಿಗೊಳಗಾದವರಿಗೆ ನಿವೇಶನ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಆದೇಶ
ಕೆಲ ದಿನಗಳ ಹಿಂದೆ ನೇಪಾಳದ ಕಮಿ ರೀತಾ ಅವರು 26ನೇ ಬಾರಿಗೆ ಎವರೆಸ್ಟ್ ಹತ್ತುವಲ್ಲಿ ಯಶಸ್ವಿಯಾಗಿದ್ದು, ಅತಿ ಹೆಚ್ಚು ಬಾರಿ ಎವರೆಸ್ಟ್ ಹತ್ತಿದ ವ್ಯಕ್ತಿ ಎನ್ನುವ ದಾಖಲೆ ಮಾಡಿದ್ದರು.