ದೇವಘತ್ (ನೇಪಾಳ) : ಪ್ರಜಾ ಪ್ರಭುತ್ವದಲ್ಲಿ ಬದುಕುತ್ತಿರುವ ನಾವುಗಳು ಎಲ್ಲಾ ಜಾತಿ, ಲಿಂಗ, ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದೇವೆ. ಹೀಗಿರುವಾಗ ಮಹಿಳೆಯರಾದ ನಾವುಗಳು ಪುರುಷರಂತೇ ಶಕ್ತಿ ಶಾಲಿಗಳು, ಅವರಿಗೂ ಸರಿ ಸಮಾನರು ಎಂಬ ವಾದಗಳು ಇವೆ. ಆ ವಾದಕ್ಕೆ ಸಾಥ್ ಕೊಡುವಂತಹ ಕಾರ್ಯಕ್ರಮವನ್ನು ನೇಪಾಳದಲ್ಲಿ ಆಯೋಜಿಸಲಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು ಈ ಬಾರಿಯ ವಿಶ್ವ ಮಹಿಳಾ ದಿನದ ಅಂಗವಾಗಿ ಮಾರ್ಚ್ 8 ರಂದು ನೇಪಾಳದ ದೇವಘತ್ ಎಂಬ ಹಳ್ಳಿಯಲ್ಲಿ ಮಹಿಳೆಯರ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರ ವಿಶೇಷ ಅಂದ್ರೆ ಮಹಿಳೆಯರು ತಮ್ಮ ಗಂಡನನ್ನು ಹೆಗಲ ಮೇಲೆ ಹೊತ್ತುಕೊಂಡು 100 ಮೀಟರ್ ಓಡಬೇಕಿತ್ತು.
ಕಾರ್ಯಕ್ರಮದ ಮೂಲ ಉದ್ದೇಶ ಸ್ತ್ರೀಯರು ಕೂಡ ಪುರುಷರಿಗೆ ಸಮಾನಳು. ಲಿಂಗ ತಾರತಮ್ಯವನ್ನು ಒಡೆದು ಹಾಕುವುದೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಆ ಕಾರಣದಿಂದಲೇ ವಿಶ್ವ ಮಹಿಳಾ ದಿನದ ಅಂಗವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಓಟ ಸ್ಪರ್ಧೆಯಲ್ಲಿ 16 ದಂಪತಿಗಳು ಭಾಗವಹಿಸಿದ್ದು, ಎಲ್ಲರಿಗೂ ಸರ್ಟಿಫಿಕೇಟ್ ಗಳನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹಳ್ಳಿಯ ಕೌನ್ಸಿಲ್ ಮುಖ್ಯಸ್ಥೆ ದುರ್ಗಾ ಬಹದ್ದೂರ್, ಕಾರ್ಯಕ್ರಮ ಆಯೋಜಿಸಿದ ಮುಖ್ಯ ಉದ್ದೇಶ ಏನಂದ್ರೆ, ನಾವು ಮಹಿಳೆಯರೂ ಕೂಡ ಪುರುಷರಷ್ಟೇ ಪ್ರಬಲರು ಎಂಬ ಸಂದೇಶವನ್ನು ತಿಳಿಸುದೇ ಆಗಿತ್ತು ಎಂದರು.
ಒಟ್ಟಾರೆಯಾಗಿ ಹೇಳುವುದಾದರೆ ಈ ಕಾರ್ಯಕ್ರಮ ಉತ್ತಮ ಉದ್ದೇಶದಿಂದ ಕೂಡಿದ್ದು, ಮಹಿಳೆಯರ ಓಟದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.