Advertisement

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

01:08 AM May 21, 2024 | Team Udayavani |

ಕಾಠ್ಮಂಡು: ನೇಪಾಲ ಪ್ರಧಾನಮಂತ್ರಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ ಅವರು ಸೋಮವಾರ ಸಂಸತ್ತಿನಲ್ಲಿ ವಿಶ್ವಾಸ ಮತಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ರಚಂಡ ನೇತೃತ್ವದ ಸಮ್ಮಿಶ್ರ ಸರಕಾರವು ಆಡಳಿತ ಮುಂದುವರಿಸಲು ಸಾಧ್ಯವಾ ಗಿದೆ. ಜನತಾ ಸಮಾಜವಾದಿ ಪಾರ್ಟಿ (ಜೆಎಸ್‌ಪಿ) ಇತ್ತೀಚೆ ಗಷ್ಟೇ ಪ್ರಚಂಡ ಅವರ ಸರ್ಕಾರ ಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವ ಪರಿಸ್ಥಿತಿ ಎದುರಾಗಿ ತ್ತು. 275 ಮಂದಿ ಸದಸ್ಯರ ಸಂಸತ್ತಿನಲ್ಲಿ 157 ಸದಸ್ಯರು ಸರಕಾರಕ್ಕೆ ಬೆಂಬಲ ನೀಡಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಪ್ರಚಂಡ ಪಿಎಂ ಆಗಿ ಅಧಿಕಾರಕ್ಕೆ ಬಂದ ಬಳಿಕ ಇದು 4ನೇ ಬಾರಿ ವಿಶ್ವಾಸಮತ ಸಾಬೀತುಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next