ಕಾಠ್ಮಂಡು: 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ನೇಪಾಳದ ತಾರಾ ಏರ್ ಲೈನ್ಸ್ ನಾಪತ್ತೆಯಾಗಿದೆ. ಬೆಳಿಗ್ಗೆ 9:55 ಕ್ಕೆ ಪೊಖರಾದಿಂದ ಜೋಮ್ಸಮ್ ಗೆ ಹಾರುತ್ತಿದ್ದ ತಾರಾ ಏರ್ ಲೈನ್ಸ್ ನ 9 ಎನ್ಎಇಟಿ ಅವಳಿ-ಎಂಜಿನ್ ವಿಮಾನ ಸಂಪರ್ಕ ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.
ನಾಪತ್ತೆಯಾದ ವಿಮಾನದಲ್ಲಿ ನಾಲ್ಕು ಭಾರತೀಯ ಮತ್ತು ಮೂರು ಜಪಾನ್ ಪ್ರಜೆಗಳು ಇದ್ದರು. ಉಳಿದವರು ನೇಪಾಳಿ ಪ್ರಜೆಗಳು ಮತ್ತು ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 22 ಪ್ರಯಾಣಿಕರಿದ್ದರು.
ವಿಮಾನವು ಮುಸ್ತಾಂಗ್ ಜಿಲ್ಲೆಯ ಜೋಮ್ಸೋಮ್‌ನ ಆಕಾಶದ ಮೇಲೆ ಕಾಣಿಸಿಕೊಂಡಿತು ಮತ್ತು ನಂತರ ಅದನ್ನು ಮೌಂಟ್ ಧೌಲಗಿರಿಗೆ ತಿರುಗಿಸಲಾಯಿತು, ನಂತರ ಅದು ಸಂಪರ್ಕಕ್ಕೆ ಬರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಇಂದು ಸಂಜೆಯೊಳಗೆ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಅಂತಿಮ: ಸಿಎಂ ಬೊಮ್ಮಾಯಿ
ನಾಪತ್ತೆಯಾಗಿರುವ ವಿಮಾನಗಳ ಹುಡುಕಾಟಕ್ಕಾಗಿ ಗೃಹ ಸಚಿವಾಲಯವು ಮುಸ್ತಾಂಗ್ ಮತ್ತು ಪೊಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ನೇಪಾಳ ಸೇನೆಯ ಹೆಲಿಕಾಪ್ಟರ್ ಕೂಡ ಹುಡುಕಾಟಕ್ಕೆ ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದು ಗೃಹ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.