ಕಠ್ಮಂಡು: ಇಂಡೋ-ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಸೊಬ್ರಾಜ್ ಬಿಡುಗಡೆಗೆ ನೇಪಾಳದ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ವಯಸ್ಸಿನ ಆಧಾರದಲ್ಲಿ ಚಾರ್ಲ್ಸ್ ಸೊಬ್ರಾಜ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ. ಇಬ್ಬರು ಅಮೇರಿಕನ್ ಪ್ರವಾಸಿಗರನ್ನು ಕೊಂದ ಆರೋಪದ ಮೇಲೆ ಚಾರ್ಲ್ಸ್ 2003 ರಿಂದ ನೇಪಾಳದ ಜೈಲಿನಲ್ಲಿದ್ದರು. ಈ ನಡುವೆ ಬಿಡುಗಡೆಗೆ ಆದೇಶ ನೀಡಿದ ಸುಪ್ರೀಂ ಕೋರ್ಟ್ ಬಿಡುಗಡೆಯಾದ 15 ದಿನಗಳಲ್ಲಿ ಅವರನ್ನು ಗಡಿಪಾರು ಮಾಡುವಂತೆಯೂ ಕೋರ್ಟ್ ಆದೇಶಿಸಿದೆ.
ಸೊಬ್ರಾಜ್, ಭಾರತೀಯ ಮತ್ತು ವಿಯೆಟ್ನಾಂ ಪೋಷಕರನ್ನು ಹೊಂದಿರುವ ಫ್ರೆಂಚ್ , ನೇಪಾಳಕ್ಕೆ ಪ್ರವೇಶಿಸಲು ನಕಲಿ ಪಾಸ್ಪೋರ್ಟ್ ಬಳಸಿ ಮತ್ತು 1975 ರಲ್ಲಿ ಇಬ್ಬರು ಬ್ಯಾಕ್ಪ್ಯಾಕರ್ಗಳಾದ ಯುಎಸ್ ಪ್ರಜೆ ಕೊನ್ನಿ ಜೋ ಬೊರೊನ್ಜಿಚ್, 29 ಮತ್ತು ಅವರ ಗೆಳತಿ ಕೆನಡಾದ ಲಾರೆಂಟ್ ಕ್ಯಾರಿಯೆರ್, 26 ಅನ್ನು ಕೊಂದ ಆರೋಪ ಹೊರಿಸಲಾಯಿತು.
ಭಾರತೀಯ ಮತ್ತು ವಿಯೆಟ್ನಾಂನ ಪೋಷಕರನ್ನು ಹೊಂದಿದ ಸೊಬ್ರಾಜ್, 1975 ರಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ನೇಪಾಳಕ್ಕೆ ಬಂದಿದ್ದ ಇಲ್ಲಿ ಅಮೆರಿಕನ್ ಪ್ರಜೆಯಾದ ಕೋನಿ ಜೋ ಬೊರೊಂಜಿಚ್ ಮತ್ತು ಅವನ ಕೆನಡಾದ ಗೆಳತಿ ಲಾರೆಂಟ್ ಕ್ಯಾರಿಯರ್ ಎಂಬ ಇಬ್ಬರನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಸೊಬ್ರಾಜ್ ಬರೋಬ್ಬರಿ 28 ವರ್ಷದ ಬಳಿಕ 2003ರಲ್ಲಿ ಬಂದನವಾಗಿತ್ತು. ಸದ್ಯ 19 ವರ್ಷಗಳ ಜೈಲು ವಾಸ ಅನುಭವಿಸಿದ ಆರೋಪಿಯನ್ನು ವಯಸ್ಸಿನ ಆಧಾರದ ಮೇಲೆ ಬಿಡುಗಡೆಗೊಳಿಸಲು ನೇಪಾಳದ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಬಿಡುಗಡೆಯಾದ 15 ದಿನಗಳಲ್ಲಿ ಅವರನ್ನು ಗಡಿಪಾರು ಮಾಡುವಂತೆಯೂ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಜೋಡೋ ಯಾತ್ರೆಯಲ್ಲಿ ಕೋವಿಡ್ ಪ್ರೋಟೋಕಾಲ್ ಅನುಸರಿಸಬೇಕು: ಕೇಂದ್ರ ಸೂಚನೆ