Advertisement

Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ

05:26 PM May 16, 2024 | Team Udayavani |

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಸಮನ್ಸ್ ಗೆ ಆರೋಪಿಗಳು ಹಾಜರಾದರೆ, ನ್ಯಾಯಾಲಯದ ಅನುಮತಿ ಪಡೆಯದೆ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Advertisement

ಇಡಿಯಿಂದ ಬಂಧಿಸದ ಆರೋಪಿಯು ಸಮನ್ಸ್ ಪಡೆದ ನಂತರ ನ್ಯಾಯಾಲಯಕ್ಕೆ ಬಂದರೆ, ಅವರು ಪಿಎಂಎಲ್‌ಎಯ ಸೆಕ್ಷನ್ 45 ರ ಪ್ರಕಾರ ಜಾಮೀನು ಪಡೆಯಲು ಕಠಿಣ ಷರತ್ತುಗಳನ್ನು ಪೂರೈಸಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವಿಶೇಷ ನ್ಯಾಯಾಲಯದ ಸಮನ್ಸ್ ಗೆ ಆರೋಪಿಗಳು ಹಾಜರಾದರೆ ಅವರನ್ನು ಬಂಧಿಸುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಕೋರ್ಟ್ ಹೇಳಿದೆ.

ನ್ಯಾ.ಅಭಯ್ ಎಸ್ ಓಕಾ ಮತ್ತು ನ್ಯಾ.ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶ ನೀಡಿದೆ.

“ಸಮನ್ಸ್ ನಂತರ ವ್ಯಕ್ತಿಯನ್ನು ಹಾಜರುಪಡಿಸಿದ ನಂತರ ಇಡಿ ಆರೋಪಿಯ ಕಸ್ಟಡಿಯನ್ನು ಬಯಸಿದರೆ, ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ಇಡಿ ಕಸ್ಟಡಿಯನ್ನು ಪಡೆಯಬಹುದು. ನ್ಯಾಯಾಲಯವು ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ತೃಪ್ತಿಪಡಿಸುವ ಕಾರಣಗಳೊಂದಿಗೆ ಮಾತ್ರ ಕಸ್ಟಡಿಯನ್ನು ನೀಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

Advertisement

ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 70 ರ ಅಡಿಯಲ್ಲಿ ಆರೋಪಿಯು ಸಮನ್ಸ್‌ಗೆ ಉತ್ತರಿಸಲು ವಿಫಲವಾದರೆ ಮಾತ್ರ ಅರೆಸ್ಟ್ ವಾರೆಂಟ್ ನೀಡಬಹುದು. ಅಲ್ಲದೆ ಮೊದಲ ನಿದರ್ಶನದಲ್ಲಿ ಇದು ಜಾಮೀನು ನೀಡಬಹುದಾದ ವಾರಂಟ್ ಆಗಿರಬೇಕು ಎಂದು ಕೋರ್ಟ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next