Advertisement

Nepal; ಮಳೆ, ಪ್ರವಾಹ, ಭೂಕುಸಿತಕ್ಕೆ 170 ಸಾವು

02:01 AM Sep 30, 2024 | Team Udayavani |

ಕಠ್ಮಂಡು: ನೇಪಾಲದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನೂರಾರು ಮಂದಿ ಮೃತಪಟ್ಟಿದ್ದಾರೆ. ರವಿವಾರದ ವೇಳೆಗೆ ಒಂದೇ ದಿನದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ 170 ಮಂದಿ ಸಾವಿಗೀಡಾ ಗಿದ್ದಾರೆ ಎಂದು ಅಧಿಕೃತ ಮಾಹಿತಿ ದೊರೆತಿದೆ. ಇದಲ್ಲದೇ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 68 ಮಂದಿ ನಾಪತ್ತೆಯಾಗಿದ್ದಾರೆ. 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತ ವರದಿಯಾಗಿವೆ. ಕಠ್ಮಂಡುವಿ ನಲ್ಲಿ ಪ್ರವಾಹದ ನೀರಿನ ಮಟ್ಟ ಹೆಚ್ಚಾ ಗುತ್ತಲೇ ಇದ್ದು, ಈಗಾಗಲೇ 3,600 ಮಂದಿಯನ್ನು ರಕ್ಷಿಸಲಾಗಿದೆ. ಹಲವಾರು ಪ್ರಮುಖ ರಸ್ತೆ ಮಾರ್ಗಗಳ ಸಂಪರ್ಕ ಕಡಿತಗೊಂಡಿದೆ.

Advertisement

54 ವರ್ಷಗಳಲ್ಲೇ ದಾಖಲೆ ಮಳೆ: ನೇಪಾಲವು ಶನಿವಾರ 54 ವರ್ಷಗಳಲ್ಲೇ ಅತೀಹೆಚ್ಚು ಮಳೆಯನ್ನು ದಾಖಲಿಸಿದೆ. 24 ಗಂಟೆಯಲ್ಲಿ 323 ಮಿ.ಮೀ ಮಳೆ ಯಾಗಿದ್ದು, 4.12 ಲಕ್ಷ ಕುಟುಂಬಗಳಿಗೆ ಸಂಕಷ್ಟ ಉಂಟಾಗಿದೆ. ರಕ್ಷಣ ಕಾರ್ಯಾಚ ರಣೆಗೆ 3 ಸಾವಿರ ಸಿಬಂದಿ ನಿಯೋ ಜಿಸ ಲಾಗಿದೆ. ಭಾಗ¾ತಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ, ನೇಪಾಲಕ್ಕೆ ಹೊಂದಿಕೊಂಡಿರುವ ಬಿಹಾ ರದ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ಘೋಷಿ ಸಲಾಗಿದೆ. ಬಿಹಾರದ ಸೀತಾಮಹಿì ಯಲ್ಲಿ ಅಡ್ಡಲಾಗಿ ನಿರ್ಮಿಸಿದ್ದ ಅಣೆಕಟ್ಟು ಒಡೆದಿದ್ದು, ದುರಸ್ತಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next