Advertisement

ಸಂಬಂಧ ವೃದ್ಧಿಗೆ ಭಾರತ-ನೇಪಾಲ ನಿರ್ಧಾರ

09:22 AM Jan 23, 2020 | Hari Prasad |

ಕಠ್ಮಂಡು/ಹೊಸದಿಲ್ಲಿ: ಭಾರತ ಮತ್ತು ನೇಪಾಲ ತಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಬಲಪಡಿಸಲು ನಿರ್ಧರಿಸಿವೆ. 140 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಜೋಗ್ಬನಿ-ಬಿರಾಟ್‌ನಗರ ಏಕೀಕೃತ ಚೆಕ್‌ಪೋಸ್ಟ್‌ ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಜಂಟಿಯಾಗಿ ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಉದ್ಘಾಟಿಸಿದ್ದಾರೆ.

Advertisement

ಕೇಂದ್ರ ಸರಕಾರದ ನೆರವಿನಿಂದ ಅದನ್ನು ನಿರ್ಮಿಸಲಾಗಿದೆ. ಅದು 260 ಎಕರೆ ಜಮೀನಿನಲ್ಲಿ ಹರಡಿ ಕೊಂಡಿದ್ದು, 500 ಟ್ರಕ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 2018ರಲ್ಲಿ ರಕ್ಸಾಲ್‌-ಬಿರ್ಗುಂಜ್‌ನಲ್ಲಿ ಮೊದಲ ಏಕೀಕೃತ ಚೆಕ್‌ಪೋಸ್ಟ್‌ ನಿರ್ಮಿಸಲಾಗಿತ್ತು.

ಇನ್ನೊಂದೆಡೆ, ಅಯೋಧ್ಯೆ- ಲಕ್ನೋ- ಜನಕಪುರ ಧಾಮ್‌ ಮಾರ್ಗದಲ್ಲಿ ಬಸ್‌ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ನೇಪಾಳದ ಖಾಸಗಿ ಸಾರಿಗೆ ಸಂಸ್ಥೆಯೊಂದರ ಜತೆಗೆ ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next