ಕಾಠ್ಮಂಡು: ನೇಪಾಳ ಸಂಸತ್ ನಲ್ಲಿ ಸೋಮವಾರ(ಮೇ 10) ನಡೆದ ವಿಶ್ವಾಸಮತ ಯಾಚನೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಪರಾಜಯಗೊಂಡಿದ್ದು, ಇದರಿಂದ ಒಲಿ ಅವರಿಗೆ ತೀವ್ರ ಹಿನ್ನಡೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ನೇಪಾಳ ಪ್ರಧಾನಿ ಕೆಪಿ ಶರ್ಮಾ ಸಂಸತ್ ನ ಕೆಳಮನೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಕೇವಲ 93 ಮತಗಳನ್ನಷ್ಟೇ ಪಡೆದಿದ್ದರು. ಕೆಪಿ ಶರ್ಮಾ ಅವರ ಶಿಫಾರಸಿನ ಮೇರೆಗೆ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಮೇ 10ರಂದು ಸಂಸತ್ ವಿಶೇಷ ಅಧಿವೇಶನ ಕರೆದಿದ್ದರು.
ಪುಷ್ಪಕಮಲ್ ದಹಾಲ್ ಪ್ರಚಂಡ ನೇತೃತ್ವದ ಸಿಪಿಎನ್ (ಕೇಂದ್ರ ಮಾವೋವಾದಿ) ಪಕ್ಷ ಒಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿತ್ತು. ಇದರಿಂದಾಗಿ ಪ್ರಧಾನಿ ಕೆಪಿ ಶರ್ಮಾ ಒಲಿಗೆ ವಿಶ್ವಾಸಮತ ಯಾಚನೆಯಲ್ಲಿ ಸೋಲುಂಟಾಗಿದೆ ಎಂದು ವರದಿ ತಿಳಿಸಿದೆ.
ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಲಿ, ಸಂಸತ್ ನಲ್ಲಿ ವಿಶ್ವಾಸಮತ ಯಾಚಿಸಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದರು.