Advertisement

ನೇಪಾಲ: ಜನರೇ ಇಲ್ಲಿ ಹೋರಾಡಬೇಕು !

12:43 PM Apr 26, 2020 | Sriram |

ಕಾಠ್ಮಂಡು: ಸರಣಿಯಾಗಿ ಭೂಮಿ ಕಂಪಿಸುವುದರ ಮೂಲಕ ನೇಪಾಲ ತತ್ತರಿಸಿತ್ತು. ಹಿಮಾಲಯದ ತಪ್ಪಲಿನಲ್ಲಿ ಸಂಭವಿಸಿದ ಈ ಮಹಾ ದುರಂತದಿಂದ ನೇಪಾಲವಷ್ಟೇ ಅಲ್ಲ ಭಾರತ ಉಪಖಂಡ ಕೂಡ ಈ ಹಿಂದೆ ಬೆಚ್ಚಿ ಬಿದ್ದಿತ್ತು. ಈ ಭೀಕರ ಭೂಕಂಪ ಸಂಭವಿಸಿದ್ದು ಐದು ವರ್ಷಗಳ ಹಿಂದೆ.

Advertisement

ಭೂಕಂಪ ಬಳಿಕದ ಸಮಸ್ಯೆಗಳನ್ನು ಇನ್ನೂ ಮೀರಿ ನಿಂತಿಲ್ಲ. ಜನರ ಮನಸ್ಸಿನಲ್ಲಿ ಅಂದು ಮೂಡಿರುವ ಆತಂಕ ಇನ್ನೂ ಪೂರ್ತಿಯಾಗಿ ತಿಳಿಯಾಗಿಲ್ಲ. ಇದರ ನಡುವೆ ಈಗ ಕೋವಿಡ್‌ 19 ಆ ದೇಶವನ್ನು ಕಾಡುತ್ತಿದೆ. 2015ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 9 ಸಾವಿರ ಮಂದಿ ಸಾವನ್ನಪ್ಪಿದ್ದರು. ಮಾತ್ರವಲ್ಲದೆ ನೂರಾರು ಮನೆಗಳು ಧರೆಗುರುಳಿದ್ದವು.

ಆ ಸಂದರ್ಭದಲ್ಲಿ ಸಿಂಧೂಪಾಲ್‌ ಚೌಕ್‌ನಲ್ಲಿ ವಾಸವಿದ್ದ ರೇಷ್ಮಾ ಅಮ್ಮ ಮತ್ತು ತಮ್ಮನನ್ನು ಕಳೆದು ಕೊಂಡಿದ್ದಳು. ಈಗ ಅಪ್ಪನೇ ಸರ್ವಸ್ವ. ಈಗ ಅವಳಿಗೆ 16 ವರುಷ. ಅಂದಿನಿಂದಲೇ ವಿಧಿಯನ್ನು ದೂರುತ್ತಿದ್ದ ಆಕೆ ಈಗ ಬೇರೆ ದಾರಿ ತೋರದೆ ದೇವರ ಮೊರೆ ಹೋಗಿ ದ್ದಾಳೆ. ಈಗಿನ ದುಗುಡಕ್ಕೆ ಕಾರಣವೆಂದರೆ ಆಕೆಯ ತಂದೆಗೆ ಕೋವಿಡ್‌ 19 ಸೋಂಕು ಕಾಣಿಸಿರುವುದು.

ಸ್ವಂತ ಮನೆಯಿಲ್ಲ
ವೃತ್ತಿಯಲ್ಲಿ ಕೃಷಿಕರಾಗಿರುವ ಅಪ್ಪ ಮತ್ತು ಮಗಳು ತರಕಾರಿ ಬೆಳೆದು ಹೇಗೋ ಜೀವನ ಸಾಗಿಸುತ್ತಿದ್ದರು. ಈಗ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಸು ಹೊಂದಿಸಲು ವ್ಯಾಪಾರವನ್ನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಭೂಕಂಪದ ಸಂದರ್ಭ ಅರ್ಧ ಉರುಳಿದ ಮನೆಗೆ ತೇಪೆ ಹಾಕಿ ಅದರಲ್ಲಿಯೇ ಆತಂಕದ ಜೀವನ ಸಾಗುತ್ತಿತ್ತು. ಆರ್ಥಿಕ ಸಮಸ್ಯೆ ಎಂಬ ಕಾರಣ ನೀಡಿ ಸರಕಾರವೂ ಇಲ್ಲಿನವರಿಗೆ ಯಾವುದೇ ನೆರವು ನೀಡಿರಲಿಲ್ಲ.
ಅನಂತರವೂ ನೇಪಾಲದ ಸ್ಥಿತಿ ಅಷ್ಟೇನೂ ಸುಧಾರಿಸ ಲಿಲ್ಲ. ರಾಜಕೀಯ ವ್ಯವಸ್ಥೆಯೂ ದುರ್ಬಲವಾಗಿದ್ದು, ಜನರನ್ನು ಅರ್ಧದಲ್ಲಿ ಕೈಬಿಟ್ಟು ಅಧಿಕಾರವನ್ನು ಗಿಟ್ಟಿಸಲು ಮಾತ್ರ ಸೆಣಸುತ್ತಿರುವುದು ಕಂಡು ಬರುತ್ತಿದೆ.

ಕೋವಿಡ್‌ 19 ಬರೆ
ನೇಪಾಲದಲ್ಲಿ ಜ. 23ರಂದು ಮೊದಲ ಕೋವಿಡ್‌ 19 ಪ್ರಕರಣ ಕಾಣಿಸಿಕೊಂಡಿತ್ತು. ಮಾರ್ಚ್‌ ಕೊನೆಯ ವಾರದಲ್ಲಿ ಇದು ಏರಿಕೆಯಾಗಲಾರಂಭಿಸಿತು. ಈಗ ಒಟ್ಟು 49 ಪ್ರಕರಣ ಪತ್ತೆಯಾಗಿದ್ದು, 12 ಮಂದಿ ಗುಣಮುಖವಾಗಿದ್ದಾರೆ. ಈ ತನಕ ಯಾವುದೇ ಸಾವುಗಳು ಸಂಭವಿಸಿಲ್ಲ ಎನ್ನುವುದೇ ಸಮಾಧಾನದ ಸಂಗತಿ. 2005ರಲ್ಲಿ ಭೂಕಂಪ ಸಂಭವಿಸಿದ ಸಂದರ್ಭ ಶೇ. 44ರಷ್ಟು ಆಸ್ಪತ್ರೆಗಳು ಹಾನಿಗೊಳ ಗಾಗಿದ್ದವು, ಈ ಆಸ್ಪತ್ರೆಗಳು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಒಂದು ವೇಳೆ ದೇಶದಲ್ಲಿ ಕೋವಿಡ್‌ 19 ಸೋಂಕು ವ್ಯಾಪಕವಾದರೆ ಆಸ್ಪತ್ರೆಗಳ ಕೊರತೆ ದೇಶವನ್ನು ಬಹುವಾಗಿ ಕಾಡಲಿದೆ.

Advertisement

ಸಾರ್ವಜನಿಕರ ಸಹಕಾರ
ಮೊದಲ ಕೋವಿಡ್‌ 19 ಪ್ರಕರಣ ದೃಢವಾಗುತ್ತಿದ್ದಂತೆ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಲಾಗಿದೆ. ಆದರೆ ವಿದೇಶಗಳಲ್ಲಿ ಮತ್ತು ನೇಪಾಲದೊಳಗೆ ಕೆಲಸ ಮಾಡುವ ಸಾವಿರಾರು ವಲಸಿಗರಿಗೆ ಯಾವುದೇ ಅವಕಾಶ ಕಲ್ಪಿಸಲು ಸರಕಾರ ಪ್ರಯತ್ನಿಸಿಲ್ಲ. ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಖರೀದಿಸುವಾಗ ಸರಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂಬ ಆರೋಪಕ್ಕೆ ಸರಕಾರ ಸಿಲುಕಿಕೊಂಡಿದೆ. ಭೂಕಂಪದ ಸಂದರ್ಭದಂತೆಯೇ, ಸಾರ್ವಜನಿಕರು ತಮ್ಮದೇ ಒಂದು ತಂಡ ರಚಿಸಿ ಕೂಡಲೇ ಸಹಾಯ ಮಾಡಲು ಮುಂದಾಗಿದ್ದಾರೆ. ವಿವಿಧ ತಂಡಗಳು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಮತ್ತು ವಿತರಿಸುವಲ್ಲಿ ತೊಡಗಿವೆ. ಇಲ್ಲಿನ ಈಗಿನ ವ್ಯವಸ್ಥೆ ಹೇಗಿದೆ ಎಂದರೆ ಸರಕಾರದಿಂದ ಸಹಾಯ ಬರುತ್ತದೆ, ಪರಿಸ್ಥಿತಿ ನಿಯಂತ್ರಿಸುತ್ತದೆ ಎಂದು ಯಾರೂ ಕಾಯುತ್ತಿಲ್ಲ. ಜನರೇ ಪರಸ್ಪರ ನೆರವಾಗುತ್ತಾ ಕೊರೊನಾ ಮಾರಿಯನ್ನು ಓಡಿಸಲು ಟೊಂಕ ಕಟ್ಟಿದ್ದಾರೆ. ಇದರಿಂದಾಗಿ ಕೋವಿಡ್‌ 19 ಹರಡುವ ಪ್ರಮಾಣ ಕಡಿಮೆಯಾಗಿದೆ.

ದೀರ್ಘ‌ ಸಮಯ ಲಾಕ್‌ಡೌನ್‌ ಇದ್ದುದರಿಂದ ಇಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಹೊರ ಊರಿನಿಂದ ಬಂದ ವಲಸೆ ಕಾರ್ಮಿಕರಿಗೆ ನಿಲ್ಲುವುದಕ್ಕೆ ಮತ್ತು ಉಣ್ಣುವುದಕ್ಕೆ ವ್ಯವಸ್ಥೆಯೇ ಇಲ್ಲದೆ ಕೊನೆಗೆ ಸುಪ್ರೀಂ ಕೋರ್ಟ್‌ ಮಧ್ಯೆ ಪ್ರವೇಶಿಸಿ ಜನರನ್ನು ಅವರವರ ಊರಿಗೆ ಕಳುಹಿಸಿ ಕೊಡುವಂತೆ ಆದೇಶ ಮಾಡಬೇಕಾಯಿತು. ಈ ವಾರದಲ್ಲಷ್ಟೇ ಹೆಚ್ಚಿನ ಕಾರ್ಮಿಕರು ಊರಿಗೆ ಮರಳಿದ್ದಾರೆ.

ಒಂದು ವ್ಯವಸ್ಥೆಯಲ್ಲಿ ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದರೆ ಆ ವ್ಯವಸ್ಥೆ ಸೋತಿದೆ ಎಂದೇ ಅರ್ಥ. ಆ ವ್ಯವಸ್ಥೆಯ ಪರಿಶ್ರಮಕ್ಕೆ ಜನರು ಯೋಗದಾನದ ಮೂಲಕ ಹೆಗಲಿಗೆ ಹೆಗಲು ಕೊಟ್ಟು ನಡೆದರೆ ಆ ವ್ಯವಸ್ಥೆ ಯಶಸ್ವಿಯಾಗಿದೆ ಎಂದರ್ಥ. ನೇಪಾಲದಲ್ಲಿರುವ ಸ್ಥಿತಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿದೆ. ಅದರಲ್ಲೂ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಆರೋಗ್ಯ ವ್ಯವಸ್ಥೆ ಇಂದಿಗೂ ಸಬಲವಾಗಿಲ್ಲ. ಅದರ ಪರಿಣಾಮ ಕೋವಿಡ್‌ 19 ಸಮರದಲ್ಲಿ ಸೋಲುತ್ತಿರುವುದು ಎಂದು ಹೇಳಿದರೆ ತಪ್ಪೇನೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next