ಪಣಜಿ: ನೇಪಾಳದ ಮೇಯರ್ ಒಬ್ಬರ ಪುತ್ರಿ ಗೋವಾದಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. 36 ವರ್ಷದ ಆರತಿ ಹಮಾಲ್ ಅವರು ಗೋವಾದಲ್ಲಿ ನಾಪತ್ತೆಯಾದವರು.
ಓಶೋ ಮೆಡಿಟೇಶನ್ ನ ಅನುಯಾಯಿಯಾದ ಆರತಿ ಕಳೆದ ಕೆಲವು ತಿಂಗಳಿನಿಂದ ಗೋವಾದಲ್ಲಿ ನೆಲೆಸಿದ್ದರು. ಸೋಮವಾರ ರಾತ್ರಿ ಕೊನೆಯ ಬಾರಿಗೆ ಅವರು ಕಾಣಸಿಕ್ಕಿದ್ದರು ಎಂದು ವರದಿಯಾಗಿದೆ.
ಸೋಮವಾರ ರಾತ್ರಿ 9.30ರ ಸುಮಾರಿಗೆ ಅಶ್ವೆಮ್ ಸೇತುವೆಯ ಸಮೀಪದಲ್ಲಿ ಆರತಿ ಕೊನೆಯದಾಗಿ ಕಾಣಿಸಿಕೊಂಡರು. ಅವರು ಕಳೆದ ಕೆಲವು ತಿಂಗಳುಗಳಿಂದ ಓಶೋ ಧ್ಯಾನ ಕೇಂದ್ರದೊಂದಿಗೆ ಸಂಬಂಧ ಹೊಂದಿದ್ದರು ಎಂದು ನೇಪಾಳದ ಪತ್ರಿಕೆ, ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ಧಂಗಧಿ ಉಪ-ಮೆಟ್ರೋಪಾಲಿಟನ್ ನಗರದ ಮೇಯರ್ ಗೋಪಾಲ್ ಹಮಾಲ್ ಅವರು ತಮ್ಮ ಹಿರಿಯ ಮಗಳನ್ನು ಹುಡುಕಲು ಸಹಾಯ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ. ಆರತಿ ನಾಪತ್ತೆಯಾಗಿರುವ ಬಗ್ಗೆ ಅವರ ಸ್ನೇಹಿತೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಗೋಪಾಲ್ ಹೇಳಿದ್ದಾರೆ.
“ನನ್ನ ಹಿರಿಯ ಮಗಳು, ಆರತಿ ಅವರು ಓಶೋ ಧ್ಯಾನಸ್ಥರಾಗಿದ್ದಾರೆ, ಅವರು ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸಿಸುತ್ತಿದ್ದಾರೆ, ಆದರೆ ನಿನ್ನೆಯಿಂದ ಆರತಿ ಜೋರ್ಬಾ ವೈಬ್ಸ್ ಅಶ್ವೆಮ್ ಬ್ರೀಜ್ ಅವರ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಎಂದು ಅವರ ಸ್ನೇಹಿತನಿಂದ ನನಗೆ ಸಂದೇಶ ಬಂದಿದೆ. ಗೋವಾದಲ್ಲಿ ನೆಲೆಸಿರುವವರು ನನ್ನ ಮಗಳು ಆರತಿಯ ಹುಡುಕಾಟದಲ್ಲಿ ನೆರವಾಗಿ ಎಂದು ವಿನಂತಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.