Advertisement

ನೇಪಾಲ ಪ್ರವಾಹ, ಭೂಕುಸಿತ ಬಲಿ ಸಂಖ್ಯೆ 115; ಬಾಧಿತರು 60 ಲಕ್ಷ

04:44 PM Aug 15, 2017 | udayavani editorial |

ಕಾಠ್ಮಂಡು : ನೇಪಾಲದಲ್ಲಿ ಜಡಿಮಳೆ, ಪ್ರವಾಹ, ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ ಇಂದು 115 ಕ್ಕೇರಿದೆ. ಇನ್ನೂ 40 ಜನರು ನಾಪತ್ತೆಯಾಗಿದ್ದಾರೆ. ಸುಮಾರು 60 ಲಕ್ಷ ಜನರು ಪ್ರವಾಹದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ. 

Advertisement

ಸುಮಾರು 2,800 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಮನೆ ಮಾರು ಕಳೆದುಕೊಂಡವರು ಕಳೆದ ಮೂರು ದಿನಗಳಿಂದ ತಾತ್ಕಾಲಿಕ ಆಸರೆ ತಾಣಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಪ್ರವಾಹ ಸಂತ್ರಸ್ತರು ಆವಶ್ಯಕ ಪರಿಹಾರ ಪೂರೈಕೆಗಳನ್ನು ಇನ್ನಷ್ಟೇ ಪಡೆಯಬೇಕಾಗಿದೆ ಎಂದು ಕಾಠ್ಮಂಡು ಪೋಸ್ಟ್‌ ವರದಿ ಮಾಡಿದೆ. 

ಪ್ರವಾಹದಿಂದ ಆಗಿರುವ ನಾಶ ನಷ್ಟ ವನ್ನು ಅಂದಾಜಿಸಲು ಗೃಹ ಸಚಿವ ಜನಾರ್ದನ ಶರ್ಮಾ ನೇತೃತ್ವದಲ್ಲಿ ಸಮಿತಿಯೊಂದನ್ನು ರೂಪಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಮತ್ತು 12 ಸಚಿವಾಲಯಗಳ ಕಾರ್ಯದರ್ಶಿಗಳು ಈ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ರಾಮಕೃಷ್ಣ ಸುಬೇದಿ ತಿಳಿಸಿದ್ದಾರೆ. 

ಸುಮಾರು 27,000 ಸಿಬಂದಿಗಳು ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next