Advertisement

ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಕೂಟಕ್ಕೆ ನೇಪಾಳಕ್ಕೆ ಅರ್ಹತೆ

06:35 AM Feb 16, 2018 | |

ನವದೆಹಲಿ: ಮುಂಬರುವ ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಕೂಟಕ್ಕೆ ನೇಪಾಳ ತಂಡ ಅರ್ಹತೆ ಗಿಟ್ಟಿಸಿಕೊಂಡಿದೆ. ಅರ್ಹತೆಗಾಗಿ ನಡೆದ ಪಂದ್ಯದಲ್ಲಿ ನೇಪಾಳ ತಂಡವು ಕೆನಡಾವನ್ನು ಮಣಿಸಿತು.

Advertisement

ಇತ್ತೀಚೆಗೆ ನಡೆದ ಐಪಿಎಲ್‌ ಹರಾಜಿನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡಕ್ಕೆ ಆಯ್ಕೆಯಾದ ಮೊದಲ ನೇಪಾಳ ಕ್ರಿಕೆಟಿಗ 17 ವರ್ಷದ ಲೆಗ್‌ ಸ್ಪಿನ್ನರ್‌ ಲಮಿಚ್ಚಾನೆ 40ಕ್ಕೆ 2 ವಿಕೆಟ್‌ ಕಿತ್ತರು. ಹೀಗಾಗಿ ಕೆನಡಾ 50 ಓವರ್‌ಗೆ 8 ವಿಕೆಟ್‌ ಕಳೆದುಕೊಂಡು 194 ರನ್‌ಗಳಿಸಿತು. ಈ ಗುರಿಯನ್ನು ನೇಪಾಳ ಸುಲಭವಾಗಿ ಬೆನ್ನಟ್ಟಿತು. ಮುಂದೆ ನೇಪಾಳ ಅರ್ಹತಾ ಸುತ್ತಿನ ಪಂದ್ಯದಲ್ಲಿ “ಎ’ ಗುಂಪಿನಲ್ಲಿ ಪ್ರಬಲ ವೆಸ್ಟ್‌ ಇಂಡೀಸ್‌, ಹಾಲೆಂಡ್‌ನ‌ಂತಹ sಪ್ರಮುಖ ತಂಡಗಳನ್ನು ಎದುರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next