ಕಾಠ್ಮಂಡು/ನವದೆಹಲಿ: ನೇಪಾಳದಲ್ಲಿ ಬುಧವಾರ (ನವೆಂಬರ್ 09) ನಸುಕಿನ ವೇಳೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮತ್ತೆ ಹಸುವಿನ ಮೇಲೆ ದಾಳಿ ಮಾಡಿದ ಹುಲಿ: ಹುಣಸೂರಿನಲ್ಲಿ ಬೆಚ್ಚಿ ಬೀಳಿಸಿದ ಹುಲಿ ದಾಳಿ ಪ್ರಕರಣ
ನಸುಕಿನ ವೇಳೆ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಭಯಭೀತಿಯಿಂದ ಜನರು ಮನೆಯಿಂದ ಹೊರಗೆ ಓಡಿಬಂದಿರುವುದಾಗಿ ವರದಿ ವಿವರಿಸಿದೆ. ನೇಪಾಳದಲ್ಲಿನ ಪ್ರಬಲ ಭೂಕಂಪದಿಂದಾಗಿ ನೆರೆಯ ದೆಹಲಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿರುವುದಾಗಿ ವರದಿ ಹೇಳಿದೆ.
ನೇಪಾಳದ ಡೋಟಿ ಜಿಲ್ಲೆಯಲ್ಲಿ ಸೇನಾಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಘಟನೆಯಲ್ಲಿ ನೂರಾರು ಮನೆಗಳು ಕುಸಿದು ಬಿದ್ದಿದ್ದು, ಸಾವು-ನೋವಿನ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ವರದಿ ತಿಳಿಸಿದೆ.
ಸುಮಾರು ಹತ್ತು ಸೆಕೆಂಡ್ಸ್ ಗಳ ಕಾಲ ಭೂಮಿ ಕಂಪಿಸಿದ್ದು, ನೋಯ್ಡಾ ಮತ್ತು ಗುರುಗ್ರಾಮ್ ನಲ್ಲಿಯೂ ಭೂಕಂಪನವಾಗಿರುವುದಾಗಿ ವರದಿ ತಿಳಿಸಿದೆ. ಕೇವಲ 5 ಗಂಟೆಗಳ ಅವಧಿಯಲ್ಲಿ ನೇಪಾಳದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.