Advertisement

ಭಾರತದ ನೋಟಿಗೆ ನಿಷೇಧ

09:40 AM Dec 15, 2018 | Karthik A |

ಕಠ್ಮಂಡು: ಭಾರತದ 100 ರೂ.ಗಿಂತ ಅಧಿಕ ಮೌಲ್ಯದ ಕರೆನ್ಸಿ ನೋಟುಗಳನ್ನು ನೇಪಾಳ ಸರಕಾರ ನಿಷೇಧಿಸಿದೆ. 2,000 ರೂ, 500 ಮತ್ತು 200 ರೂ. ನೋಟುಗಳನ್ನು ಸರಕಾರ ಮಾನ್ಯ ಮಾಡಿಲ್ಲ. ಹಾಗಾಗಿ, 100 ರೂ.ಗಿಂತ ಹೆಚ್ಚು ಮೌಲ್ಯದ ಭಾರತೀಯ ಕರೆನ್ಸಿ ನೋಟುಗಳನ್ನು ಇರಿಸಿಕೊಳ್ಳುವುದು ಹಾಗೂ ಚಲಾವಣೆ ಮಾಡುವಂತಿಲ್ಲ ಎಂದು ನೇಪಾಳದ ಮಾಹಿತಿ ಮತ್ತು ಸಂವಹನ ಸಚಿವರು ಹೇಳಿದ್ದಾರೆ. ಈ ನಿರ್ಧಾರದಿಂದ ನೇಪಾಳಕ್ಕೆ ತೆರಳುವ ಭಾರತೀಯ ಪ್ರವಾಸಿಗಳಿಗೆ ತೊಂದರೆಯಾಗಲಿದೆ ಎನ್ನಲಾಗಿದೆ. ಆದರೆ, ಮತ್ತೂಂದು ಮಾಹಿತಿಯ ಪ್ರಕಾರ, ಈ ನಿಷೇಧದಿಂದಾಗಿ ನೇಪಾಳದಲ್ಲಿ ಭಾರತದ ನಕಲಿ ನೋಟುಗಳ ಮುದ್ರಣ, ಉಗ್ರರಿಂದ ಭಾರತದ ಕರೆನ್ಸಿಯ ದುರ್ಬಳಕೆಗೆ ಕಡಿವಾಣ ಬೀಳಲಿದೆ ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next