Advertisement
ಬುನಾದಿ ಹಂತದ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಎಂಬ ನಾಲ್ಕು ಹಂತಗಳನ್ನು ಎನ್‌ಇಪಿ ಒಳಗೊಂಡಿದೆ. ಪ್ರಯೋಗ, ಚಟುವಟಿಕೆ ಆಧಾರಿತ ಕಲಿಕೆಗೆ ಎನ್‌ಇಪಿ ಒತ್ತು ನೀಡಿದೆ. ಇದರಿಂದ ಮಕ್ಕಳಿಗೆ ಕಲಿಕೆ ಸರಳವಾಗಿರುತ್ತದೆ, ಪರಿಣಾ ಮಕಾರಿಯಾಗುತ್ತದೆ. ಕಲಿಕೆಯ ಹಂತದಲ್ಲೇ ಕೌಶಲವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ.
Related Articles
ನೀಟ್, ಜೆಇಇ, ಸಿಇಟಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸರಕಾರಿ ಹುದ್ದೆಗಳು, ಬ್ಯಾಂಕಿಂಗ್, ಸೇನೆ, ವಿದೇಶಗಳಲ್ಲಿ ವ್ಯಾಸಂಗ ಮಾಡಲು ಅಗತ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಗಣನೀಯವಾಗಿ ಯಶಸ್ಸು ಸಾಧಿಸಲು ಎನ್‌ಇಪಿ ಸಹಿತ ರಾಜ್ಯ ಪಠ್ಯಕ್ರಮದ ಶಾಲಾ ಮಕ್ಕಳಿಗೆ ಅನುಕೂಲವಾಗುತ್ತದೆ. ವಿಜ್ಞಾನ, ಗಣಿತ, ಚಟುವಟಿಕೆ, ಪ್ರಯೋಗ, ಕೌಶಲ ವಿಷಯಗಳಲ್ಲಿ ಸಿಬಿಎಸ್ಸಿ ಮತ್ತು ರಾಜ್ಯ ಪಠ್ಯಕ್ರಮವು ಬಹುತೇಕ ಒಂದೇ ಆಗಿರುತ್ತದೆ. ಎನ್‌ಇಪಿ ಪಠ್ಯಕ್ರಮವು ಮಗುವಿನ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜ್ಞಾನಾಧಾರಿತ ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವುದು ಎನ್‌ಇಪಿ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
Advertisement
ಅನ್ಯಾಯವಾಗುವುದು ಯಾರಿಗೆ?ರಾಜ್ಯದ ಸರಕಾರಿ ಶಾಲೆಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಬಹುತೇಕ ಬಡವರು, ಬಡ ರೈತರ ಮಕ್ಕಳು ವ್ಯಾಸಂಗ ಮಾಡು ತ್ತಿದ್ದಾರೆ. ಅದರಲ್ಲೂ ದಲಿತ ಮತ್ತು ತಳ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಈ ಮಕ್ಕಳಿಗೆ ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಕೌಶಲ ಆಧಾರಿತ ವಿಜ್ಞಾನ, ಗಣಿತ, ಇಂಗ್ಲಿಷ್ ಶಿಕ್ಷಣದ ಬದಲು ಅದೇ ಹಳಸಲು ಕಾಂಗ್ರೆಸ್ ಮತ್ತು ಎಡ ಸಿದ್ಧಾಂತದ ಪಾಠಗಳನ್ನು ಬೋಧಿಸುವ ಮೂಲಕ ಬಡವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಂಗ್ರೆಸ್ ಪಕ್ಷ ಅಡ್ಡಗಾಲು ಹಾಕುತ್ತಿದೆ. ವೈಜ್ಞಾನಿಕ ಶಿಕ್ಷಣದ ಬದಲು ಬಾಲ್ಯದಿಂ ದಲೇ ಮಕ್ಕಳು ಪರಸ್ಪರ ದ್ವೇಷಿಸುವ, ದೂಷಿಸುವ ಪಾಠವನ್ನು ಕಲಿಸಲು ಕಾಂಗ್ರೆಸ್ ಮುಂದಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಂತಹ ಪಾಠಗಳನ್ನು ಪಠ್ಯದ ಮೂಲಕ ಮಕ್ಕಳಿಗೆ ಕಲಿಸಿರುವ ಕಾಂಗ್ರೆಸ್ ಪಕ್ಷ, ತನ್ನ ಹಿಮ್ಮುಖ ಚಲನೆಯ ಸಿದ್ಧಾಂತವನ್ನು ಮುಂದುವರಿಸಿದೆ. ಹೀಗಾಗಿಯೇ ಪ್ರಗತಿಯ ದೃಷ್ಟಿಕೋನದ ಎನ್‌ಇಪಿ ತಿರಸ್ಕರಿಸುವುದಾಗಿ ಘೋಷಿಸಿದೆ. ಉತ್ತಮ ಭವಿಷ್ಯಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಲು ಇಚ್ಛಿಸುವ ಪಾಲಕರು, ತಮ್ಮ ಮಕ್ಕಳನ್ನು ಟ್ಯೂಶನ್, ಕೋಚಿಂಗ್‌ಗೆ ಸೇರಿಸುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಕೋಚಿಂಗ್ ಮತ್ತು ಟ್ಯೂಶನ್ ಬಲಗೊಳ್ಳುತ್ತದೆ. ಆಧುನಿಕ ಕಾಲದಲ್ಲಿ ಪ್ರಯೋಜನಕ್ಕೆ ಬಾರದ ಕಾಂಗ್ರೆಸ್ ಮತ್ತು ಎಡ ಸಿದ್ಧಾಂತದ ಶಿಕ್ಷಣ ನೀತಿಯಿಂದ ಬಡ ಮಕ್ಕಳಿಗೆ ಸಿಗಬೇಕಾದ ಕೌಶಲ, ವೈಜ್ಞಾನಿಕ, ವೃತ್ತಿ ಆಧಾರಿತ ಜೀವನ ರೂಪಿಸಿಕೊಳ್ಳುವ ಶಿಕ್ಷಣ ಮರೀಚಿಕೆಯಾಗುತ್ತದೆ. -ಬಿ.ಸಿ.ನಾಗೇಶ್, ಮಾಜಿ ಶಿಕ್ಷಣ ಸಚಿವ